ವಿಶೇಷ ವರದಿ:

ಎನ್.ಎನ್. ದಿನೇಶ್

*ಗೋಣಿಕೊಪ್ಪ, ಜ. 24: ಕೆಲದಿನಗಳಿಂದ ಪಟ್ಟಣದಲ್ಲಿ ಜಾರಿಗೆ ತಂದ ಏಕಮುಖ ಸಂಚಾರ ವ್ಯವಸ್ಥೆ ಸುರಕ್ಷತೆಯ ಅಭದ್ರತೆ ಕಾಡುತ್ತಿದೆ.

ಅಪಘಾತಗಳನ್ನು ತಪ್ಪಿಸಲು ಟ್ರಾಫಿಕ್ ವ್ಯವಸ್ಥೆಯನ್ನು ನಿಯಂತ್ರಿಸಲು ಏಕಮುಖ ಸಂಚಾರದ ನಿಯಮವನ್ನು ತರಲಾಯಿತು. ಆದರೆ ವ್ಯವಸ್ಥೆ ವ್ಯಾಪಾರಸ್ಥರನ್ನು ಕಾಡುತ್ತಿದ್ದರೆ. ಮತ್ತೊಂದೆಡೆ ಸಾರ್ವಜನಿಕರಲ್ಲಿ ಆತಂಕವನ್ನು ಮೂಡಿಸುತ್ತಿದೆ. ಸಂಚಾರ ವ್ಯವಸ್ಥೆಯಲ್ಲಿ ಪೆÇಲೀಸರ ನಿಯಂತ್ರಣವಿಲ್ಲದೆ ಇರುವುದು, ವಾಹನ ಸಂಚಾರದಲ್ಲಿ ವೇಗ ಮಿತಿ ಇಲ್ಲದೆ ಇರುವುದು ಪಾದಚಾರಿ ಗಳನ್ನು ಬಲಿತೆಗೆದುಕೊಳ್ಳುವ ವ್ಯವಸ್ಥೆ ನಿರ್ಮಾಣವಾಗಿದೆ.

ಪೆÇಲೀಸ್ ವ್ಯವಸ್ಥೆಯಲ್ಲಿನ ಸಡಿಲಿಕೆ ಅವ್ಯವಸ್ಥೆಗಳಿಗೆ ಕಾರಣವಾಗಿದೆ. ಪಟ್ಟಣದಲ್ಲಿ ಕೆಲದಿನಗಳ ಹಿಂದೆ ಕೈಬುಲಿರ ನಂದಕುಮಾರ್ ಎಂಬುವವರ ಮೇಲೆ ವಾಹನವೊಂದು ಡಿಕ್ಕಿ ಹೊಡೆದು ಹೋಗಿದ್ದರು ಯಾವ ವಾಹನ ಡಿಕ್ಕಿ ಹೊಡೆದಿದೆ ಎಂದು ಪತ್ತೆ ಹಚ್ಚಲು ಸಹ ಸಾಧ್ಯವಾಗದ ವ್ಯವಸ್ಥೆಯೊಂದು ನಿರ್ಮಾಣವಾಗಿದೆ.

ಪಟ್ಟಣದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳು ಕಾರ್ಯನಿರ್ವಹಿಸದೆ ಇರುವುದು ಸಮಸ್ಯೆಗಳು ಹುಟ್ಟಲು ಮತ್ತೊಂದು ಕಾರಣವೂ ಹೌದು.

ಕೆಲ ವರ್ಷಗಳ ಹಿಂದೆ ಪಟ್ಟಣದಲ್ಲಿ ಭದ್ರತೆಗಾಗಿ ಸ್ಥಳೀಯ ಗ್ರಾಮಪಂಚಾಯಿತಿ ಮತ್ತು ಪೆÇಲೀಸ್ ಇಲಾಖೆ ಕೈಜೋಡಿಸಿ ಸಿಸಿ ಕ್ಯಾಮರಾವನ್ನು ಅಳವಡಿಸಲಾಯಿತು ಬಸ್ ನಿಲ್ದಾಣದ ಮುಂಭಾಗ ಮತ್ತು ಪೆÇನ್ನಂಪೇಟೆ ರಸ್ತೆ ತಿರುವಿನಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಆದರೆ ಕ್ಯಾಮೆರಗಳ ಚಲನವಲನ ಗಳು ನಿಷ್ಕ್ರಿಯಗೊಂಡು ಕ್ಯಾಮರದ ಹದ್ದಿನ ಕಣ್ಣುಗಳು ಕುರುಡಾಗಿವೆ. ಕೆಲ ದಿನಗಳ ಹಿಂದೆ ಪೆÇನ್ನಂಪೇಟೆ ತಿರುವಿನಲ್ಲಿ ಅಳವಡಿಸಿದ್ದ ಕ್ಯಾಮೆರಗಳನ್ನು ತೆರವುಗೊಳಿಸ ಲಾಗಿದೆ. ಮತ್ತೆ ಅಳವಡಿಸುವ ವ್ಯವಸ್ಥೆಯಾಗಿಲ್ಲ. ಕ್ಯಾಮರಗಳನ್ನು ನಿಯಂತ್ರಿಸುವವರು ಈ ಬಗ್ಗೆ ಗಮನಹರಿಸದೆ ಇರುವುದು ಪಟ್ಟಣದಲ್ಲಿ ನಡೆಯುವ ಅಪರಾಧ ಗಳನ್ನು ಸೂಕ್ಷ್ಮವಾಗಿ ಗುರುತಿಸಲು ಸಾಧ್ಯವಾಗುತ್ತಿಲ್ಲ.

ಗೋಣಿಕೊಪ್ಪ ಪಟ್ಟಣವು ಉಗ್ರಗಾಮಿಗಳ ತರಬೇತಿ ತಾಣವಾಗುತ್ತದೆ ಎಂಬ ವರದಿಗಳೂ ಆತಂಕವನ್ನು ಮೂಡಿಸುತ್ತಿದೆ ಆದರೆ ಇಂತಹ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಹರಿಸಬೇಕು ಯಾವುದಾದರೂ ಕುರುಹುಗಳನ್ನು ಪತ್ತೆ ಹಚ್ಚಬೇಕು ಎಂದರೆ ಸೂಕ್ತ ವ್ಯವಸ್ಥೆಗಳೇ ಇಲ್ಲ. ಪಟ್ಟಣ ಅಭದ್ರತೆಯಿಂದ ಕೂಡಿದೆ. ಹಲವು ಅಂಗಡಿ ಮಳಿಗೆಗಳಲ್ಲಿ ಅಳವಡಿಸಿ ರುವ ಕ್ಯಾಮರಾಗಳು ಸೆರೆಹಿಡಿ ಯುವ ದೃಶ್ಯಗಳನ್ನು ಪತ್ತೆಹಚ್ಚಲು ಸಾಧ್ಯವಾಗದಂತಿವೆ. ಮತ್ತೊಂದೆÉಡೆ ವರ್ತಕರು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ವ್ಯಾಪಾರಗಳು ನಿಧಾನಗತಿಯನ್ನು ಅನುಸರಿಸಿದೆ.

ವಾಹನದಲ್ಲಿ ಬರುವವರಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದು ಮತ್ತು ಏಕಮುಖ ಸಂಚಾರದಿಂದ ಪಟ್ಟಣದ ಹೃದಯಭಾಗದಲ್ಲಿ ವ್ಯಾಪಾರಗಳಿಗೆ ತೊಡಕಾಗಿದೆ ಇದರಿಂದ ವ್ಯಾಪಾರಸ್ಥರು ಕಂಗಾಲಾ ಗಿದ್ದಾರೆ. ಈಗಾಗಲೇ ಬಹಳಷ್ಟು ಅಂಗಡಿಗಳು ವ್ಯಾಪಾರವಿಲ್ಲದೆ ಮುಚ್ಚುತ್ತಿವೆ. ಆರ್ಥಿಕ ಹೊರೆ ವ್ಯಾಪಾರಸ್ಥರ ಹೆಗಲೇರಿದೆ.

ಒತ್ತಡ ತಂದು ಮಾಡಿದ ವ್ಯವಸ್ಥೆ ಯನ್ನು ಹಿಂಪಡೆದು ವ್ಯವಸ್ಥೆಯನ್ನು ಯಥಾ ರೀತಿ ಹಿಂದಿನಂತೆ ಕಾಯ್ದುಕೊಳ್ಳಬೇಕೆಂದು ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಅಭಿಪ್ರಾಯ ಪಡುವಂತಾಗಿದೆ.