ಮಡಿಕೇರಿ, ಜ. 23: 7ನೇ ಹೊಸಕೋಟೆ ಸಂತ ಸೆಬಾಸ್ಟಿನ್ ದೇವಾಲಯದ ವಾರ್ಷಿಕೋತ್ಸವವನ್ನು ತಾ. 24ರಂದು (ಇಂದು) ನಡೆಸಲು ಧರ್ಮಗುರುಗಳು ಮತ್ತು ಸರ್ವ ಸದಸ್ಯರು ನಿಶ್ಚಯಿಸಿದ್ದಾರೆ.

ತಾ. 24ರಂದು (ಇಂದು) ಅಪರಾಹ್ನ 4.15ಕ್ಕೆ ಧ್ವಜಾರೋಹಣ, 4:30ಕ್ಕೆ ವಿಧಾನ ಪೂರ್ವಕ ದಿವ್ಯಬಲಿಪೂಜೆ, ಆರು ಗಂಟೆಗೆ ಸಮಾಧಿ ಸಂದರ್ಶನ ಹಾಗೂ ಪ್ರಾರ್ಥನೆ, ತಾ. 25ರಂದು 4:30 ಗಂಟೆಗೆ ವಿಧಾನ ಪೂರ್ವಕ ಬಲಿಪೂಜೆ, ತಾ. 26ರಂದು 4:30ಕ್ಕೆ ವಿಧಾನ ಪೂರ್ವಕ ದಿವ್ಯ ಬಲಿಪೂಜೆ ಹಾಗೂ ಹಬ್ಬದ ಸಂದೇಶ, 6.30 ಗಂಟೆಗೆ ಮೆರವಣಿಗೆ ಸಮಾರೋಪ, ಆಶೀರ್ವಾದ, 7:30ಕ್ಕೆ ಹರಕೆ ವಸ್ತುಗಳ ಹರಾಜು, 8.30 ಗಂಟೆಗೆ ಅನ್ನದಾನ ಏರ್ಪಡಿಸಲಾಗಿದೆ ಎಂದು ಚರ್ಚ್‍ನ ಆಡಳಿತ ಮಂಡಳಿ ತಿಳಿಸಿದೆ.