ಮಡಿಕೇರಿ, ಜ. 23: ಭಾರತೀಯ ವಿದ್ಯಾಭವನ, ಕೊಡಗು ವಿದ್ಯಾಲಯ ವತಿಯಿಂದ ಫೀ.ಮಾ. ಕೆ.ಎಂ. ಕಾರ್ಯಪ್ಪ ಅವರ ಜನ್ಮ ದಿನಾಚರಣೆಯನ್ನು ತಾ. 28 ರಂದು ಬೆಳಿಗ್ಗೆ 9.30 ಗಂಟೆಗೆ ರೋಶನಾರದಲ್ಲಿ ಏರ್ಪಡಿಸಲಾಗಿದೆ. ಕೊಡಗು ವಿದ್ಯಾಲಯ ಮಕ್ಕಳಿಂದ ಭಜನೆ, ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.