ಮಡಿಕೇರಿ, ಜ. 23: ತಾಳತ್ತಮನೆಯ ಪುರಾತನ ಲಿಂಗರೂಪಿಣಿ ಶ್ರೀ ದುರ್ಗಾ ಭಗವತಿ ದೇವಾಲಯದ ಪುನರ್ ಪ್ರತಿಷ್ಠಾಪನೆ ಹಾಗೂ ಬ್ರಹ್ಮ ಕಲಶೋತ್ಸವ ಫೆ. 7 ರಿಂದ 12 ರವರೆಗೆ ನಡೆಯಲಿದೆ. ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ದೇವಾಲಯದ ಅಭಿವೃದ್ಧಿಗೆ ವಿವಿಧ ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು, ಗ್ರಾಮಸ್ಥರು, ದಾನಿಗಳು ಹಾಗೂ ಸಾರ್ವಜನಿಕರು ಧನ ಸಹಾಯ ನೀಡಿದ್ದಾರೆ. ಕಾಡು ಪ್ರದೇಶದಲ್ಲಿ ಪತ್ತೆಯಾದ ಲಿಂಗದ ಬಗ್ಗೆ ಅಷ್ಟಮಂಗಲ ಪ್ರಶ್ನೆ ಕೇಳಿದಾಗ ಲಿಂಗರೂಪಿಣಿ ಶ್ರೀ ದುರ್ಗಾಭಗವತಿ ಎಂದು ತಿಳಿದು ಬಂದಿತ್ತು. ಇದೀಗ ತಾಳತ್ತಮನೆಯಲ್ಲಿ ಬೃಹತ್ ದೇವಾಲಯ ನಿರ್ಮಾಣ ಗೊಂಡಿದ್ದು, ಮುಂದಿನ ತಿಂಗಳು ಆರು ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಜರುಗಲಿವೆ ಎಂದು ದೇವಾಲಯ ಸಮಿತಿ ತಿಳಿಸಿದೆ.