ವೀರಾಜಪೇಟೆ, ಜ. 23: ಅಂತರರಾಷ್ಟ್ರೀಯ ಮೈಬುಕಾನ್ ಗೋಜೂರ್ಯೂ ಕರಾಟೆ ಶಾಲೆಯ ವತಿಯಿಂದ ಎರಡು ದಿನಗಳ ಕಾಲ ಕರಾಟೆ ವಿದ್ಯಾರ್ಥಿಗಳಿಗೆ ಅರಮೇರಿಯ ಎಸ್.ಎಂ.ಎಸ್. ವಿದ್ಯಾಪೀಠ ಹಾಗೂ ವೀರಾಜ ಪೇಟೆಯ ಬೋರೇಗೌಡ ಕಾಂಪ್ಲೆಕ್ಸ್‍ನ ಸಭಾಂಗಣದಲ್ಲಿ ಏಳನೇ ವರ್ಷದ ನ್ಯಾಷನಲ್ ಕರಾಟೆ ಟ್ರೈನಿಂಗ್ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಶಿಬಿರದಲ್ಲಿ ಗೋಜೂರ್ಯೂ ಕರಾಟೆ ಶಾಲೆಯ ಇಂಡಿಯಾದ ಮುಖ್ಯ ಶಿಕ್ಷಕ ಶಿಹಾನ್ ಎಸ್. ಪಾರ್ಥಿಭನ್ ಹಾಗೂ ಸೆನ್‍ಸಾಯ್ ಎಂ.ಬಿ. ಚಂದ್ರನ್ ತರಬೇತಿ ನೀಡಿದರು. ಶಿಬಿರದ ಸಮಾರೋಪ ದಲ್ಲಿ ತರಬೇತಿ ಪಡೆದ ವಿದ್ಯಾರ್ಥಿ ಗಳಿಗೆ ಸಮಾರಂಭದಲ್ಲಿ ಎಸ್.ಎಂ. ಎಸ್. ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಕೆ.ಪಿ. ಕುಸುಮ್, ಬಿಜೆಪಿಯ ಪಟ್ರಪಂಡ ರಘು ನಾಣಯ್ಯ ಹಾಗೂ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ವೀಣಾ ನಾಯಕ್ ಅರ್ಹತಾ ಪತ್ರ ನೀಡಿದರು. ತರಬೇತಿಯಲ್ಲಿ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.