ಮಡಿಕೇರಿ, ಜ. 23: ಗೋಣಿಕೊಪ್ಪಲಿನಲ್ಲಿ ಉಗ್ರರ ಚಟುವಟಿಕೆ ಶಂಕೆ ಬೆನ್ನಲ್ಲೇ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ. ಈ ದಿಸೆಯಲ್ಲಿ ಕೊಡಗಿನ ಕಾಫಿ ತೋಟಗಳಲ್ಲಿ ಕೆಲಸ ನಿರತ ಕಾರ್ಮಿಕರ ಪೂರ್ವಪರ ಮಾಹಿತಿ ನೀಡುವಂತೆ ಬೆಳೆಗಾರರಿಗೆ ಮೌಖಿಕ ಸೂಚನೆ ನೀಡದೆ. ಈ ದಿಢೀರ್ ಬೆಳವಣಿಗೆ ಯಿಂದ ಅನೇಕ ಬೆಳೆಗಾರರು ಗಲಿಬಿಲಿಗೆ ಒಳಗಾದರೆ, ಕಾರ್ಮಿಕ ವರ್ಗ ದಾಖಲಾತಿಗಾಗಿ ಹೆಣಗಾಡುತ್ತಿದ್ದ ದೃಶ್ಯ ಗೋಚರಿಸಿತು.ಇಂದು ಜಿಲ್ಲೆಯ ಮೂರು ಪೊಲೀಸ್ ಉಪವಿಭಾಗಗಳ ವ್ಯಾಪ್ತಿಯ ತೋಟ ಕಾರ್ಮಿಕರನ್ನು ಸಂಬಂಧಿಸಿದ ಮಾಲೀಕರು ಪೊಲೀಸರ ಮುಂದೆ ‘ಪೆರೇಡ್’ ನಡೆಸಬೇಕಾಯಿತು. ಅಲ್ಲದೆ ತಮ್ಮ ತೋಟಗಳಲ್ಲಿ ನೆಲೆಸಿರುವ ಕಾರ್ಮಿಕ ಕುಟುಂಬಗಳ ಸಂಪೂರ್ಣ ವಿವರಗಳೊಂದಿಗೆ ದಾಖಲಾತಿ ಪ್ರದರ್ಶಿಸಬೇಕಾಯಿತು.ಸಾವಿರಾರು ಕಾರ್ಮಿಕರು: ಈ ಕಾರ್ಮಿಕರ ತಪಾಸಣೆ ಸಂಬಂಧ ಇಂದು ಬೆಳ್ಳಂಬೆಳಿಗ್ಗೆ ಜಿಲ್ಲಾ ಕೇಂದ್ರ ಮಡಿಕೇರಿ ಮುಖ್ಯ ರಸ್ತೆ ಬದಿಯ ಕ್ರಿಸ್ಟಲ್ ಹಾಲ್‍ನಲ್ಲಿ ಇಂತಹ ಕಾರ್ಮಿಕರ ದಾಖಲಾತಿ ಪರಿಶೀಲನೆಗೆ ಪೊಲೀಸ್ ಇಲಾಖೆ ವ್ಯವಸ್ಥೆ ರೂಪಿಸಿತ್ತು.

ಹೀಗಾಗಿ ತೋಟ ಮಾಲೀಕರು ಹಾಗೂ ಇಂತಹ ಕಾರ್ಮಿಕರನ್ನು ಕೊಡಗಿನಲ್ಲಿ ನೋಡಿಕೊಳ್ಳುತ್ತಿರುವ ಮಧ್ಯವರ್ತಿಗಳು ಸಾಕಷ್ಟು ಕಾರು, ಜೀಪುಗಳೊಂದಿಗೆ, ಪಿಕಪ್ ವಾಹನಗಳ ಸಹಿತ ಲಾರಿಗಳಲ್ಲಿ ತುಂಬಿಸಿಕೊಂಡು ಬಂದು, ತಪಾಸಣಾ ಕೇಂದ್ರದಲ್ಲಿ ಇಳಿಸುತ್ತಿದ್ದ ಚಿತ್ರಣ ಕಂಡುಬಂತು.

ನಗರದ ಸಿದ್ದಾಪುರ ರಸ್ತೆ ತಿರುವಿನಿಂದ ಆರ್‍ಎಂಸಿ ಸಂಕೀರ್ಣ ಹಾಗೂ ಇತರೆಡೆಯ ರಸ್ತೆ ಬದಿ ಸಾಲು ಸಾಲು ಕಾರ್ಮಿಕರನ್ನು ಕರೆತಂದು ಇಳಿಸುತ್ತಿದ್ದ ದೃಶ್ಯದಿಂದ ಸ್ಥಳೀಯರು ಅಚ್ಚರಿಯೊಂದಿಗೆ ಆತಂಕ ವ್ಯಕ್ತಪಡಿಸುತ್ತಿದ್ದರು.

ವಾಸ್ತವ ತಿಳಿಯುವಷ್ಟರಲ್ಲಿ ಕ್ರಿಸ್ಟಲ್ ಹಾಲ್‍ನಲ್ಲಿ ಬಿಗಿ ಬಂದೋಬಸ್ತ್‍ನಲ್ಲಿ ಮಡಿಕೇರಿ ಪೊಲೀಸ್ ಉಪವಿಭಾಗ ದಿಂದ ತೋಟ ಕಾರ್ಮಿಕರ ಪರಿಶೀಲನೆಯೊಂದಿಗೆ ದಾಖಲಾತಿಗಳ ತಪಾಸಣೆ ನಡೆಯುತ್ತಿದ್ದುದು ಗೋಚರಿಸಿತು. ಅನೇಕ ಬೆಳೆಗಾರರು ಪರಿಸ್ಥಿತಿಗಾಗಿ

u ನಾಲ್ಕನೇ ಪುಟಕ್ಕೆ (ಮೊದಲ ಪುಟದಿಂದ) ಆತಂಕದೊಂದಿಗೆ ಬೆವರುತ್ತಾ; ಇದೆಲ್ಲ ನಮಗೆ ಗೊತ್ತಾಗಲಿಲ್ಲ ಎಂದು ‘ಶಕ್ತಿ’ಯೊಂದಿಗೆ ಉದ್ಗರಿಸಿದರು.

ಮತ ಪತ್ರ ಪ್ರದರ್ಶನ: ಈ ತೋಟ ಕಾರ್ಮಿಕರು ಮಾತ್ರ ತಂಡೋಪತಂಡ ವಾಗಿ ವಾಹನಗಳಲ್ಲಿ ಬಂದಿಳಿದು; ಅಸ್ಸಾಂ, ಪಶ್ಚಿಮ ಬಂಗಾಳ ಸೇರಿದಂತೆ ಈಶಾನ್ಯ ರಾಜ್ಯಗಳ ವಿವಿಧ ಹಳ್ಳಿಯವರೆಂದು ಹಿಂದಿ, ಇಂಗ್ಲೀಷ್ ಹಾಗೂ ಅಲ್ಲಿನ ಪ್ರಾದೇಶಿಕ ಭಾಷೆಗಳ ರಂಗು ರಂಗಿನ ಗುರುತು ಚೀಟಿ ಪ್ರದರ್ಶಿಸಿದರು.

ಕುಶಾಲನಗರ: ಸೋಮವಾರ ಪೇಟೆ ಹಾಗೂ ಕುಶಾಲನಗರ ವ್ಯಾಪ್ತಿಯ ಆ ತಾಲೂಕಿನ ಕಾರ್ಮಿಕರ ತಪಾಸಣೆ ಯೊಂದಿಗೆ ದಾಖಲಾತಿಗಳ ಪರಿಶೀಲನೆಯು; ಕುಶಾಲನಗರದ ರೈತ ಭವನದಲ್ಲಿ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಹೊರ ರಾಜ್ಯದ ಕಾರ್ಮಿಕರ ದಂಡು ಪಟ್ಟಣದೆಲ್ಲೆಡೆ ಎದುರಾಯಿತು. ಪೊಲೀಸ್ ಅಧಿಕಾರಿಗಳೊಂದಿಗೆ ಸಿಬ್ಬಂದಿ ವ್ಯಾಪಕ ಭದ್ರತೆ ನಡುವೆ ಶೋಧ ಕೈಗೊಂಡಿದ್ದರು.

ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಈ ದಾಖಲಾತಿ ಪರಿಶೀಲನೆ ಕಾರ್ಯದಲ್ಲಿ ಕುಶಾಲನಗರ ಡಿವೈಎಸ್ಪಿ ಶೈಲೇಂದ್ರ ಹಾಗೂ ವೃತ್ತ ನಿರೀಕ್ಷಕ ಮಹೇಶ್ ಅವರಿಂದ ಈಶಾನ್ಯ ರಾಜ್ಯಗಳಿಂದ ಬಂದಿರುವ ಜನರಿಂದ ಕಾರ್ಮಿಕ ವೃತ್ತಿ ಮಾಡಿಸಿಕೊಳ್ಳುತ್ತಿರುವ ತೋಟ ಮಾಲೀಕರು, ಕಟ್ಟಡ ನಿರ್ಮಾಣ ಗುತ್ತಿಗೆದಾರರು ಹಾಗೂ ಮಾಲೀಕರ ಮೂಲಕ ಕಾರ್ಮಿಕರ ಬಗ್ಗೆ ಮಾಹಿತಿ ಕಲೆ ಹಾಕಲಾಯಿತು. ಅಲ್ಲದೆ ಅಷ್ಟೂ ಮಂದಿಯ ಆಧಾರ್ ಜೋಡಣೆಯನ್ನು ಕಟ್ಟುನಿಟ್ಟಾಗಿ ಮಾಡಲು ನಿರ್ದೇಶಿಸಲಾಯಿತು. ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದರೆ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವ ಕುರಿತು ಎಚ್ಚರಿಸಲಾಯಿತು. ಸೋಮವಾರಪೇಟೆ ವೃತ್ತನಿರೀಕ್ಷಕ ನಂಜುಂಡೇಗೌಡ, ಕುಶಾಲನಗರ, ಶನಿವಾರಸಂತೆ ಹಾಗೂ ಸುಂಟಿಕೊಪ್ಪ ಠಾಣೆಗಳ ಠಾಣಾಧಿಕಾರಿಗಳಿದ್ದರು.

ಹಸುಗೂಸುಗಳು: ಇಂತಹ ಕಾರ್ಮಿಕರ ನಡುವೆ ಅನೇಕ ಹೆಂಗಳೆಯರ ಸೊಂಟದಲ್ಲಿ ಪುಟ್ಟ ಪುಟ್ಟ ಹಸುಗೂಸುಗಳು ಪರಿತಪಿಸುತ್ತಿದ್ದ ಸನ್ನಿವೇಶ ಕೂಡ ಗೋಚರಿಸ ತೊಡಗಿತು. ಪೊಲೀಸ್ ಇಲಾಖೆ ಯಿಂದ ಮೂರು ಕಡೆಗಳಲ್ಲಿ; ಕಾರ್ಮಿಕರು, ಕುಟುಂಬ ವರ್ಗ, ಮೂಲ ವಿಳಾಸ, ಸಂಬಂಧಿಸಿದ ದೃಢೀಕರಣ ಹಾಗೂ ಬೆಳೆಗಾರರ ವಿವರ ಪಡೆದು ವಾಪಾಸು ಕಳುಹಿಸಿಕೊಡುತ್ತಿದ್ದರು.

ವೀರಾಜಪೇಟೆಯಲ್ಲಿ

ವೀರಾಜಪೇಟೆ ಪೊಲೀಸ್ ವಲಯ, ತಾಲೂಕಿನಾದ್ಯಂತ ಕಾಫಿತೋಟ, ಇತರ ಕಟ್ಟಡ ಕಾಮಗಾರಿಗಾಗಿ ವಲಸೆ ಬಂದು ದಕ್ಷಿಣ ಕೊಡಗಿನಲ್ಲಿ ನೆಲೆಸಿರುವ ಭಾರತದ ಈಶಾನ್ಯ ರಾಷ್ಟ್ರಗಳಾದ ಅಸ್ಸಾಂ, ಪಶ್ಚಿಮ ಬಂಗಾಳ, ಜಾರ್ಖಂಡ್ ಸೇರಿದಂತೆ ಸುತ್ತ ಮುತ್ತಲ ರಾಜ್ಯಗಳಿಂದ ದಕ್ಷಿಣ ಕೊಡಗಿಗೆ ಬಂದಿರುವ ವಲಸಿಗರ ದಾಖಲೆ ಗಳನ್ನು ಪರಿಶೀಲಿಸುವ ಕಾರ್ಯವನ್ನು ಇಲ್ಲಿನ ಡಿವೈಎಸ್‍ಪಿ ಜಯಕುಮಾರ್ ನೇತೃತ್ವದಲ್ಲಿ ಆರಂಭಿಸಲಾಯಿತು.

ವೀರಾಜಪೇಟೆ ಸಂತ ಅನ್ನಮ್ಮ ವಿದ್ಯಾ ಸಂಸ್ಥೆಯ ದ್ವಿಶತಮಾನೋತ್ಸವ ಭವನದ ಸಭಾಂಗಣದಲ್ಲಿ ಇಂದು ಬೆಳಗಿನ 9 ಗಂಟೆಯಿಂದಲೇ ವಲಸೆ ಬಂದ ಕಾರ್ಮಿಕರ ಅಗತ್ಯ ದಾಖಲೆ ಗಳನ್ನು ಕಂಪ್ಯೂಟರ್ ಮೂಲಕ ಪರಿಶೀಲಿಸಲಾಯಿತು. ನಾಪೋಕ್ಲು, ಕಕ್ಕಬೆ, ಕಡಂಗ, ಪಾರಾಣೆ, ಬೊಳ್ಳುಮಾಡು ವಿವಿಧೆಡೆಗಳಿಂದ ವಲಸೆ ಕಾರ್ಮಿಕರು ದಾಖಲೆ ಪರಿಶೀಲನೆ ಸ್ಥಳಕ್ಕೆ ಆಧಾರ್, ಮತದಾರರ ಚೀಟಿ, ಇನ್ನಿತರ ದಾಖಲೆಗಳೊಂದಿಗೆ ಆಗಮಿಸಿದ್ದರು. ದಾಖಲೆಗಳ ಪರಿಶೀಲನೆಯಲ್ಲಿ ಪುರುಷರು, ಮಹಿಳೆಯರು, ಮಕ್ಕಳು ಭಾಗಿಯಾಗಿದ್ದರು. ಪೊಲೀಸ್ ಇಲಾಖೆ ವಲಸೆ ಕಾರ್ಮಿಕರ ಪ್ರತ್ಯೇಕ, ಪ್ರತ್ಯೇಕವಾದ ಕುಟುಂಬಗಳ ದಾಖಲೆಗಳನ್ನು ಪರಿಶೀಲಿಸುತ್ತಿದ್ದು ಕಂಡು ಬಂತು.

ಕಾಫಿ ತೋಟದಲ್ಲಿ ದುಡಿಯುತ್ತಿ ರುವ ವಲಸೆ ಕಾರ್ಮಿಕರುಗಳನ್ನು ತೋಟದ ಮಾಲೀಕರು ಜವಾಬ್ದಾರಿ ಯಿಂದ ವಾಹನಗಳಲ್ಲಿ ಕರೆದುಕೊಂಡು ಬಂದು ದಾಖಲೆಯ ಪರಿಶೀಲನೆಯ ನಂತರ ವಾಪಾಸ್ಸು ಕರೆದುಕೊಂಡು ಹೋಗುತ್ತಿದ್ದರು.

ದಾಖಲೆಗಳ ಪರಿಶೀಲನೆಗಾಗಿ, ವೀರಾಜಪೇಟೆ ತಾಲೂಕು, ವೀರಾಜಪೇಟೆ ಸುತ್ತ ಮುತ್ತಲ ಪ್ರದೇಶದಲ್ಲಿ ಕಾರ್ಮಿಕರಾಗಿ ದುಡಿಯುತ್ತಿರುವ ಸುಮಾರು 1500ಕ್ಕೂ ಅಧಿಕ ವಲಸೆ ಕಾರ್ಮಿಕರು ಭಾಗಿಯಾಗಿದ್ದರು. ದಾಖಲೆಗಳಲ್ಲಿ ದೋಷ ಕಂಡು ಬಂದಾಗ ಅಂತಹವರು ಪೊಲೀಸರ ಪ್ರಶ್ನೆಗೆ ಉತ್ತರಿಸಬೇಕು. ಮೂಲ ದಾಖಲೆಯನ್ನು ಹಾಜರುಪಡಿಸುವ ತನಕ ಪೊಲೀಸ್ ವಶದಲ್ಲಿರಬೇಕೆನ್ನುವ ಷರತ್ತು ವಿಧಿಸಲಾಗಿತ್ತು.

ದಕ್ಷಿಣ ಕೊಡಗಿಗೆ ವಲಸೆ ಬಂದ ಕಾರ್ಮಿಕರಲ್ಲಿ ಅಸ್ಸಾಂ ರಾಜ್ಯದ ನಿವಾಸಿಗಳೇ ಅಧಿಕವಾಗಿದ್ದರೆಂದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ವಲಸೆ ಬಂದ ಕಾರ್ಮಿಕರ ದಾಖಲೆ ಪರಿಶೀಲನೆಯಲ್ಲಿ ಕುಟ್ಟ, ಶ್ರೀಮಂಗಲ, ಪೊನ್ನಂಪೇಟೆ, ಗೋಣಿಕೊಪ್ಪದ ವಿವಿಧ ಕಡೆಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಸುಮಾರು 30 ಮಂದಿ ಪೊಲೀಸರು ಭಾಗವಹಿಸಿದ್ದರು. ದಾಖಲೆ ಪರಿಶೀಲನೆಗಾಗಿ ಇಂದು ಬೆಳಗಿನ 9 ಗಂಟೆಯಿಂದಲೇ ಚರ್ಚ್ ರಸ್ತೆಯನ್ನು ವಲಸೆ ಕಾರ್ಮಿಕರನ್ನು ಸಾಗಿಸುವ ವಾಹನವನ್ನು ಹೊರತು ಪಡಿಸಿ ಇತರ ಎಲ್ಲ ವಾಹನಗಳಿಗೆ ಸಂಚಾರ ನಿರ್ಬಂಧ ವಿಧಿಸಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ನಾಪೆÇೀಕ್ಲುವಿನಲ್ಲಿ

ನಾಪೆÇೀಕ್ಲು ಠಾಣಾ ವ್ಯಾಪ್ತಿಯಲ್ಲಿರುವ ತೋಟದ ಮಾಲೀಕರು ತಮ್ಮಲ್ಲಿರುವ ವಲಸಿಗ ಕಾರ್ಮಿಕರನ್ನು ದಾಖಲಾತಿ ಸಹಿತ ಠಾಣೆಗೆ ಹಾಜರುಪಡಿಸುವಂತೆ ಪೆÇಲೀಸರು ನೀಡಿದ ನಿರ್ದೇಶನದಂತೆ ತೋಟದ ಮಾಲೀಕರು ಕಾರ್ಮಿಕರನ್ನು ಠಾಣೆಗೆ ಕರೆತಂದರು. ಠಾಣೆಯಲ್ಲಿ ದಾಖಲಾತಿ ಪರಿಶೀಲನೆ ಮತ್ತು ನೋಂದಾಣೆಯ ನಂತರ ಆನ್‍ಲೈನ್ ಮೂಲಕ ಪರಿಶೀಲಿಸಲು ಪೆÇಲೀಸರು ವ್ಯವಸ್ಥೆಗೊಳಿಸಿದ್ದರು.

ಇದರಿಂದಾಗಿ ನಾಪೆÇೀಕ್ಲು ಪೆÇಲೀಸ್ ಮೈದಾನದಲ್ಲಿ ಕಾರ್ಮಿಕರೇ ಕಿಕ್ಕಿರಿದು ತುಂಬಿದ್ದರು.