ಮಡಿಕೇರಿ, ಜ. 23: ಕೊಡಗಿನಲ್ಲಿ ಉಗ್ರ ಚಟುವಟಿಕೆ ನಂಟು ಹಾಗೂ ಸುರಕ್ಷತಾ ಕ್ರಮವಾಗಿ ಪೊಲೀಸರಿಂದ ಕೊಡಗಿನ ಕಾಫಿ ತೋಟಗಳಲ್ಲಿರುವ ವಲಸಿಗ ಕಾರ್ಮಿಕರ ಗುರುತು ಪರಿಶೀಲನಾ ಕಾರ್ಯ ಜಿಲ್ಲೆ ಹಾಗೂ ದೇಶದ ಭದ್ರತಾ ದೃಷ್ಟಿಯಿಂದ ಕೈಗೊಳ್ಳಲಾಯಿತು. ಕೊಡಗು ಜಿಲ್ಲಾ ಪೊಲೀಸರಿಂದ ಜಿಲ್ಲೆಯಲ್ಲಿ ನೆಲೆಸಿರುವ ವಲಸಿಗ ಕಾರ್ಮಿಕರ ದಾಖಲಾತಿಗಳ ಪರಿಶೀಲನೆ, ಕಾಫಿ ತೋಟಗಳಲ್ಲಿ ಅಸ್ಸಾಂ ಹಾಗೂ ಇತರೆಡೆಯ ಅಕ್ರಮ ವಲಸಿಗರು ನೆಲೆಸಿರುವ ಬಗ್ಗೆ ದೂರುಗಳ ಹಿನ್ನೆಲೆ ಹಾಗೂ ಗೋಣಿಕೊಪ್ಪ ವ್ಯಾಪ್ತಿಯಲ್ಲಿ ಉಗ್ರ ಚಟುವಟಿಕೆ ಸುಳಿವು ಹಿನ್ನೆಲೆ ಪೊಲೀಸರು ಕ್ರಮಕೈಗೊಂಡರು.