ಮಡಿಕೇರಿ, ಜ. 20: ಕುಶಾಲನಗರದ ಜನತಾ ಕಾಲೋನಿ ನಿವಾಸಿ ಬಟ್ಟೆ ವ್ಯಾಪಾರಿ ಗೋವಿಂದ ರಾಜ ಶೆಟ್ಟಿ (55) ಅವರು ಹೃದಯಾಘಾತದಿಂದ ನಿಧನರಾದರು. ತಾ. 18ರ ಮುಂಜಾನೆ ಶಬರಿ ಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಯಾತ್ರೆಗೆ ತೆರಳಿ ಬೆಟ್ಟ ಹತ್ತುವಾಗ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಮೃತರು ಪತ್ನಿ, ಮೂವರು ಮಕ್ಕಳನ್ನು ಅಗಳಿದ್ದಾರೆ.