ಕುಶಾಲನಗರ, ಜ. 20: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಆಶ್ರಯದಲ್ಲಿ ತಾ. 24 ರಂದು ಸಂಜೆ 4 ಗಂಟೆಗೆ ಎಪಿಸಿಎಂಎಸ್ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಸಂಗೀತ ನೃತ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಅಕಾಡೆಮಿಯ ಸದಸ್ಯ ಹಾಗೂ ಕಾರ್ಯಕ್ರಮ ಸಂಚಾಲಕರಾದ ಎಂ.ಸಿ. ಸುಜೇಂದ್ರ ಬಾಬು ಈ ಕುರಿತು ಮಾಹಿತಿ ನೀಡಿದರು. ಅಂದು ಸಂಜೆ 4 ಗಂಟೆಗೆ ನಡೆಯುವ ಸಂಗೀತ ನೃತ್ಯೋತ್ಸವ ಕಾರ್ಯಕ್ರಮ ವನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ಕುಶಾಲನಗರ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲೆ ಬಿ.ಬಿ. ಸಾವಿತ್ರಿ, ಮಡಿಕೇರಿ ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ದಿಗ್ವಿಜಯ್ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ವಿದ್ವಾನ್ ಬಿ.ಸಿ.ಶಂಕರಯ್ಯ ಹಾಗೂ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷ ಆನೂರು ಅನಂತಕೃಷ್ಣ ಶರ್ಮ, ರಿಜಿಸ್ಟ್ರಾರ್ ಬನಶಂಕರಿ ವಿ. ಅಂಗಡಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಮಡಿಕೇರಿ ಪಂಚಮ್ ಬೋಪಣ್ಣ ಮತ್ತು ತಂಡದವರಿಂದ ಹಿಂದೂಸ್ತಾನಿ ಸಂಗೀತ, ಕುಶಾಲನಗರ ವಿದ್ವಾನ್ ಶಂಕರಯ್ಯ ಮತ್ತು ತಂಡದವರಿಂದ ಕಾವೇರಿ ನೃತ್ಯ ರೂಪಕ, ಗೋಣಿಕೊಪ್ಪ ಗುರು ಶ್ರೀನಿವಾಸ್ ಮತ್ತು ತಂಡದವರಿಂದ ವಾದ್ಯ ಸಂಗೀತ, ಚನ್ನಪಟ್ಟಣ ನರ್ತನ್ ಈವೆಂಟ್ಸ್ ವತಿಯಿಂದ ಶ್ರೀನಿವಾಸ ಕಲ್ಯಾಣ ನೃತ್ಯ ರೂಪಕ, ಸುಂಟಿಕೊಪ್ಪ ನಾದಾಂತ ನೃತ್ಯಮಯೂರಿ ನೃತ್ಯಾಲಯದ ವಿದೂಷಿ ಮಂಜುಭಾರ್ಗವಿ ನೇತೃತ್ವದ ತಂಡದಿಂದ ಸಮೂಹ ನೃತ್ಯ, ಮತ್ತು ಮೈಸೂರು ಗುರು ನಾಗಮಣಿ ಮತ್ತು ತಂಡದವರಿಂದ ಕುಚುಪುಡಿ ನೃತ್ಯ ವೈಭವ ಹಾಗೂ ಕೊಪ್ಪ ಗ್ರಾಮದ ಸತೀಶ್ ಮತ್ತು ತಂಡದವರಿಂದ ಸ್ಯಾಕ್ಸೋಫೆÇೀನ್ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿದ್ವಾನ್ ಬಿ.ಸಿ. ಶಂಕರಯ್ಯ ತಿಳಿಸಿದರು.