ವೀರಾಜಪೇಟೆ, ಜ. 20: ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮೀನುಪೇಟೆಯಲ್ಲಿ ಬ್ಲಾಕ್ ನಂ 6ರ ಸರ್ವೇ ನಂ 31/1 ಹಾಗೂ 34/1ರಲ್ಲಿ ಅಡಕವಾಗಿರುವ ಕಟ್ಟಡದ ಮೊದಲನೇ ಅಂತಸ್ತಿನಲ್ಲಿ ನಿರ್ಮಿಸಿರುವ ಮೊಬೈಲ್ ಟವರ್ನ ವಿವಾದವನ್ನು ಉಚ್ಚ ನ್ಯಾಯಾಲಯ ವಿಚಾರಣೆ ನಡೆಸಿ ಇಂಡಸ್ ಟವರ್ ಸಲ್ಲಿಸಿದ ರಿಟ್ ಅರ್ಜಿಯನ್ನು ವಜಾಗೊಳಿಸಿ ಪಟ್ಟಣ ಪಂಚಾಯಿತಿ ಪರ ತೀರ್ಪು ನೀಡಿದೆ.
ಮೀನುಪೇಟೆಯಲ್ಲಿ ನಬೀಸಾ ಎಂಬುವರಿಗೆ ಸೇರಿದ ಕಟ್ಟಡದ ಒಂದನೇ ಅಂತಸ್ತಿನಲ್ಲಿ ಮೊಬೈಲ್ ಟವರ್ ನಿರ್ಮಿಸಿರುವುದು ಕಾನೂನು ಬಾಹಿರವೆಂದು ಅದನ್ನು ತೆರವುಗೊಳಿಸುವಂತೆ ಪಟ್ಟಣ ಪಂಚಾಯಿತಿ ನೀಡಿದ ನೋಟೀಸ್ನ್ನು ಆದರಿಸಿ ಕಟ್ಟಡ ಮಾಲೀಕರು ಬೆಂಗಳೂರಿನ ಇಂಡಸ್ ಟವರ್ಸ್ನ ಮೂಲಕ ತಡೆಕೋರಿ, ಉಚ್ಚ ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಿದ್ದರು.
ಈ ಮೊಬೈಲ್ ಟವರ್ಗೆ ಸಂಬಂಧಿಸಿದಂತೆ ಪಟ್ಟಣ ಪಂಚಾಯಿತಿಯು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ 5.9.19 ಹಾಗೂ 4.10.19 ರಂದು ಮುನ್ಸಿಪಾಲಿಟೀಸ್ ಆಕ್ಟ್ 1964 ಸೆಕ್ಷನ್187ರಡಿಯಲ್ಲಿ ಟವರ್ ತೆರೆವುಗೊಳಿಸುವಂತೆ ನೋಟೀಸ್ ಜಾರಿ ಮಾಡಿ ಈ ನಿರ್ಧಾರವನ್ನು ನ್ಯಾಯಾಲಯ ಎತ್ತಿ ಹಿಡಿದು ತನ್ನ ಆದೇಶದಲ್ಲಿ ಟವರ್ ತೆರವಿಗೆ ಸೂಚಿಸಿದೆ.