ಮಡಿಕೇರಿ, ಜ. 20: ಪೊನ್ನಂಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಭಾಗದ ರಸ್ತೆಗಳಿಗೆ ಶಾಸಕರ ಅನುದಾನದಲ್ಲಿ ರೂ. 91 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು.
ಮೊದಲ ಹಂತದಲ್ಲಿ ನೆಹರು ನಗರ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು. ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ನಿಕಟಪೂರ್ವ ಅಧ್ಯಕ್ಷ ಅರುಣ್ ಭೀಮಯ್ಯ, ನೂತನ ವೀರಾಜಪೇಟೆ ತಾಲೂಕು ಅಧ್ಯಕ್ಷ ನೆಲ್ಲಿರ ಚಲನ್ ಕುಮಾರ್, ಸ್ಥಾನೀಯ ಸಮಿತಿ ಅಧ್ಯಕ್ಷ ಮುದ್ದಿಯಾಡ ಮಂಜು ಗಣಪತಿ, ಗ್ರಾಮ ಪಂಚಾಯಿತಿ ಸದಸ್ಯರಾದ ಅಮ್ಮತೀರಾ ಸುರೇಶ್, ದಶಮಿ, ಜಯಲಕ್ಷ್ಮಿ, ಹರೀಶ್, ಲಕ್ಷ್ಮಣ, ಕಂಟ್ರಾಕ್ಟರ್ ತನು, ಚೆಟ್ಟಂಗಡ ಮಹೇಶ್ ಮಂದಣ್ಣ ಹಾಗೂ ಜೀತು ಪೂಜಾರಿ ಮತ್ತು ಪಕ್ಷದ ಎಲ್ಲಾ ಕಾರ್ಯಕರ್ತರು ಹಾಜರಿದ್ದರು.
ಕಾಮಗಾರಿಗಳ ವಿವರ: ಪೊನ್ನಂಪೇಟೆ ಗ್ರಾ.ಪಂ. ಮುಖ್ಯ ರಸ್ತೆಯಿಂದ ನೆಹರುನಗರ ಸಂಪರ್ಕ ರಸ್ತೆ ಅಭಿವೃದ್ಧಿಗೆ ರೂ. 10 ಲಕ್ಷ, ಪೊನ್ನಂಪೇಟೆ ಗ್ರಾ.ಪಂ. ಕಾಟ್ರಕೊಲ್ಲಿ-ಹುದೂರು ಸಂಪರ್ಕ ರಸ್ತೆ ಅಭಿವೃದ್ಧಿಗೆ ರೂ. 10 ಲಕ್ಷ, ಪೊನ್ನಂಪೇಟೆ ಗ್ರಾ.ಪಂ. ಪೊನ್ನಂಪೇಟೆ ಟೌನ್‍ನಿಂದ ಸಾಯಿ ಶಂಕರ ಶಾಲೆಯವರೆಗೆ ರಸ್ತೆ ಅಭಿವೃದ್ಧಿ ರೂ. 10 ಲಕ್ಷ, ಪೊನ್ನಂಪೇಟೆ ಗ್ರಾ.ಪಂ. ಮುಖ್ಯ ರಸ್ತೆಯಿಂದ ಕಲ್ಲುಕೊರೆ ರಸ್ತೆ ಅಭಿವೃದ್ಧಿ ರೂ. 10 ಲಕ್ಷ, ಪೊನ್ನಂಪೇಟೆ ಗ್ರಾ.ಪಂ. ಜೋಡುಬೀಟಿ-ಸಿ.ಐ.ಟಿ. ಕಾಲೇಜು ಸಂಪರ್ಕ ರಸ್ತೆ ಅಭಿವೃದ್ಧಿ ರೂ. 10 ಲಕ್ಷ, ಪೊನ್ನಂಪೇಟೆ ಗಣಪತಿನಗರ ರಸ್ತೆ ರೂ. 8 ಲಕ್ಷ, ಪೊನ್ನಂಪೇಟೆ ಮತ್ತೂರು ಸಂಪರ್ಕ ರಸ್ತೆ ರೂ. 8 ಲಕ್ಷ, ಪೊನ್ನಂಪೇಟೆ ಗೌರಿಕೆರೆಗೆ ತಡೆಗೋಡೆ ನಿರ್ಮಾಣ ರೂ. 5 ಲಕ್ಷ, ಪೊನ್ನಂಪೇಟೆ ಕೃಷ್ಣ ಕಾಲೋನಿ ರಸ್ತೆ ರೂ. 10 ಲಕ್ಷ, ಪೊನ್ನಂಪೇಟೆ ಮತ್ತೂರು ಕೂರ್ಗ್ ಸ್ಪೋಟ್ಸ್ ಕ್ಲಬ್ ರಸ್ತೆ ರೂ. 5 ಲಕ್ಷ, ಪೊನ್ನಂಪೇಟೆ ನಂ. 461ನೇ ಮಹಿಳಾ ಸಹಕಾರ ಸಂಘದ ಸಮುದಾಯ ಭವನ ನಿರ್ಮಾಣ ರೂ. 5 ಲಕ್ಷ.