ವೀರಾಜಪೇಟೆ, ಜ. 20: ಕೇರಳದ ಕೋಯ್ ಕೋಡ್‍ನ ರೆಹಮಾನ್ ಕ್ರೀಡಾಂಗಣದಲ್ಲಿ ನಡೆದ 40ನೇ ರಾಷ್ಟ್ರಮಟ್ಟದ ಅಥ್ಲೆಟಿಕ್ ಕ್ರೀಡಾ ಕೂಟದಲ್ಲಿ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಶುಶ್ರೂಷಕಿ ಎ.ಬಿ. ಲಲಿತ ಅವರು 400 ಮೀಟರ್ ರಿಲೇಯಲ್ಲಿ ಪ್ರಥಮಸ್ಥಾನ ಗಳಿಸಿ ಎರಡು ಚಿನ್ನದ ಪದಕ ಗಳಿಸಿದ್ದಾರೆ.
ಇದೇ ಕ್ರೀಡಾಕೂಟದಲ್ಲಿ 800ಮೀ, 1500 ಮೀ ಹಾಗೂ 5000 ಮೀಟರ್ ಓಟದಲ್ಲಿ ಎರಡನೇ ಸ್ಥಾನ ಗಳಿಸಿ 3 ಬೆಳ್ಳಿ ಪದಕ, ಉದ್ದ ಜಿಗಿತದಲ್ಲಿ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಗಳಿಸಿದ್ದಾರೆ.