ವಿರಾಜಪೇಟೆ, ಜ. 20: ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ತೆರಳುವ ವೇಳೆ ದ್ವಿಚಕ್ರ ವಾಹನ ಡಿಕ್ಕಿಯಾಗಿ ಪಾದಚಾರಿ ದುರ್ಮರಣ ಹೊಂದಿದ ಘಟನೆ ವೀರಾಜಪೇಟೆ ನಗರದಲ್ಲಿ ತಡರಾತ್ರಿ ನಡೆದಿದೆ.

ವೀರಾಜಪೇಟೆ ನಗರದ ಎಫ್.ಎಂ.ಸಿ. ರಸ್ತೆ ಅಂಚಿನಲ್ಲಿರುವ ಮಾಡ್ರನ್ ವಾಚ್ ವಕ್ರ್ಸ್ ಅಂಗಡಿಯ ಮಾಲೀP ಎಂ.ಎಸ್. ಖಾಲೀದ್ ಅಹಮ್ಮದ್ (56) ಮೃತ ವ್ಯಕ್ತಿ. ಮೃತ ಖಾಲೀದ್ ಎಸ್.ಎಸ್.ಆರ್. ರಸ್ತೆಯ ಸನಿಹದಲ್ಲಿರುವ ಅಪೋಲೊ ಔಷಧಿ ಅಂಗಡಿಯಿಂದ ಔಷಧಿ ಪಡೆದುಕೊಂಡು ಹಿಂದಿರುಗಿತಿದ್ದರು. ಮುಖ್ಯ ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ದಾಟುವ ಸಂದರ್ಭ ಅಘುಂತಕನಾಗಿ ಬಂದ ದ್ವಿಚಕ್ರ ವಾಹನ ರಾಯಲ್ ಎನ್‍ಫೀಲ್ಡ್ (ಕೆಎ.12 ಎಸ್.2739) ಡಿಕ್ಕಿಯಾಗಿದೆ. ದ್ವಿಚಕ್ರ ವಾಹನ ಸವಾರ ಚೋಕಂಡಳ್ಳಿ ನಲ್ವತ್ತೊಕ್ಲು ನಿವಾಸಿ ಮೂಸಾ ಅವರ ಪುತ್ರ ರಫೀಕ್‍ನ ತಲೆ ಭಾಗಕ್ಕೆ ಮಾರಣಾಂತಿಕ ಪೆಟ್ಟು ಬಿದ್ದಿದ್ದು, ದ್ವಿಚಕ್ರ ವಾಹನ ಚಾಲಕನನ್ನು ಮಂಗಳೂರಿಗೂ, ಖಾಲೀದ್ ಅವರನ್ನು ಮೈಸೂರು ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಖಾಲೀದ್ ಇಂದು ಸಾವನ್ನಪ್ಪಿದ್ದಾರೆ. ದ್ವಿಚಕ್ರ ವಾಹನ ಸವಾರ ಮಂಗಳೂರಿನಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. -ಕೆ.ಕೆ.ಎಸ್.