ಮಡಿಕೇರಿ, ಜ. 20: ಬೆಂಗಳೂರಿನಲ್ಲಿ ನಡೆಯುತ್ತಿರುವ ಮಿನಿ ಒಲಿಂಪಿಕ್ಸ್ ಜೂನಿಯರ್ ಕಬಡ್ಡಿ ಪಂದ್ಯಾವಳಿಗೆ ಕೊಡಗಿನಲ್ಲಿ ದಿನಾಂಕ 22.1.2020 ರಂದು ಬುಧವಾರ ಸಂಜೆ 4 ಗಂಟೆಗೆ ಪುರುಷರ ಕಬಡ್ಡಿ ತಂಡವನ್ನು ಆಯ್ಕೆ ಮಾಡಲಾಗುವುದು ಆಸಕ್ತ ಕ್ರೀಡಾಪಟುಗಳು ಭಾಗವಹಿಸ ಬಹುದು. ತೂಕ 55 ಕೆಜಿ 1.1.2006ನೇ ಇಸವಿಯ ಮೇಲ್ಪಟ್ಟು ಹುಟ್ಟಿರುವ ಕ್ರೀಡಾಪಟುಗಳು ಭಾಗವಹಿಸಬಹುದು ಹಾಗೂ ಆಧಾರ್ ಕಾರ್ಡ್ ಮತ್ತು ಜನನ ದೃಢೀಕರಣ ಪತ್ರ ಕಡ್ಡಾಯವಾಗಿ ತರತಕ್ಕದ್ದು. ಆಯ್ಕೆ ಮಾಡುವ ಸ್ಥಳ ಜ್ಞಾನ ಭಾರತಿ ಶಾಲೆಯ ಮೈದಾನದಲ್ಲಿ ಸಂಜೆ ನಾಲ್ಕು ಗಂಟೆಗೆ ಸರಿಯಾಗಿ ಕ್ರೀಡಾಪಟು ಗಳು ಇರತಕ್ಕದ್ದು ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷರು ಕೊಡಗು ಜಿಲ್ಲಾ ಅಮೇಚೂರ್ ಕಬಡ್ಡಿ ಅಸೋಸಿಯೇಷನ್ ಹೆಚ್.ಎಸ್. ಉತ್ತಪ್ಪ 9980264950 ಮತ್ತು ಕಾರ್ಯದರ್ಶಿ ಬಿ.ಡಿ. ಕಪಿಲ್ ಕುಮಾರ್ 9731009741ರನ್ನು ಸಂಪರ್ಕಿಸಬಹುದು.