ವೀರಾಜಪೇಟೆ, ಜ. 19: ಶತಮಾನಗಳ ಇತಿಹಾಸವನ್ನು ಹೊಂದಿರುವ ವೀರಾಜಪೇಟೆ ಸಂತ ಅನ್ನಮ್ಮ ದೇವಾಲಯದಲ್ಲಿ ಪ್ಯಾರೀಸ್ ಡೇಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಪ್ಯಾರೀಸ್ ಡೇ ಅಂಗವಾಗಿ ದೇವಾಲಯದಲ್ಲಿ ಕ್ರೈಸ್ತ ಸಮುದಾಯದವರಿಂದ ಪ್ರಾರ್ಥನೆ, ವಿಶೇಷ ಪೂಜೆ, ಭಕ್ತಾದಿಗಳಿಗೆ ಅನ್ನದಾನ ಸಂತರ್ಪಣೆ ಜರುಗಿತು.

ಪ್ಯಾರೀಸ್ ಡೇ ಪ್ರಯುಕ್ತ ಆಯೋಜಿಸಿದ್ದ ಪುರುಷರ ಟೈಗರ್ ಫೈವ್ ಕಾಲ್ಚೆಂಡು ಪಂದ್ಯಾಟದಲ್ಲಿ ಅಪ್ಪಯ್ಯ ಸ್ವಾಮಿ ವಠಾರದ ಹೋಲಿ ಕ್ರಾಸ್ ತಂಡದವರು ಪ್ರಥಮ ಸ್ಥಾನ ಪಡೆದರು. ಕಲ್ಲುಬಾಣೆಯ ಸೈಂಟ್ ಮೇರಿಸ್ ವಠಾರದವರು ದ್ವಿತೀಯ ಸ್ಥಾನ ಪಡೆದರು.

ಮಹಿಳೆಯರ ಥ್ರೋ ಬಾಲ್ ಪಂದ್ಯಾಟದಲ್ಲಿ ಅಪ್ಪಯ್ಯ ಸ್ವಾಮಿ ವಠಾರದ ಹೋಲಿ ಕ್ರಾಸ್ ತಂಡದವರು ಪ್ರಥಮ ಹಾಗೂ ಸೆಂಟ್ ಥೋಮಸ್ ಚರ್ಚ್ ವಠಾರದವರು ದ್ವಿತಿಯ ಸ್ಥಾನ ಪಡೆದರು. ಪುರುಷರ ಹಗ್ಗ ಜಗ್ಗಾಟದಲ್ಲಿ ಸಂತ ಅನ್ನಮ್ಮ ತಂಡದ ಪಟ್ಟಣ ವಠಾರದವರು ಪ್ರಥಮ ಹಾಗೂ ಸಂತ ಅನ್ನಮ್ಮ ಚಿಕ್ಕಪೇಟೆ ವಠಾರದವರು ದ್ವಿತೀಯ ಸ್ಥಾನ ಪಡೆದರು. ಮಹಿಳೆಯರ ಹಗ್ಗ ಜಗ್ಗಾಟದಲ್ಲಿ ಸೈಂಟ್ ಜೋಸೆಪ್ ಚರ್ಚ್ ಪ್ರಥಮ ಹಾಗೂ ನೆಹರೂ ನಗರ ವಠಾರದ ಸೈಂಟ್ ಲಾರೆನ್ಸ್ ದ್ವಿತೀಯ ಸ್ಥಾನ ಪಡೆದರು. ಇದರೊಂದಿಗೆ ಪ್ಯಾರೀಸ್‍ನ ಎಲ್ಲ ವಠಾರದವರಿಗೆ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ಆಟೋಟಗಳಲ್ಲಿ ಅಧಿಕ ಅಂಕಗಳನ್ನು ಗಳಿಸಿದ ಕಲ್ಲುಬಾಣೆಯ ಸೈಂಟ್ ಮೆರೀಸ್ ವಠಾರದವರು ಪಂದ್ಯಾಟಗಳ ಚಾಂಪಿಯನ್ ಆಗಿ ಹೊರ ಹೊಮ್ಮಿದರು. ಕಾಲ್ಚೆಂಡು ಪಂದ್ಯಾಟದಲ್ಲಿ ಅತಿ ಹೆಚ್ಚು ಗೋಲು ಬಾರಿಸಿದ ಗಿನಿಶ್ ಪ್ರಶಸ್ತಿ ಪಡೆದರು. ಉತ್ತಮ ಗೋಲ್ ಕೀಪರ್ ಪ್ರಶಸ್ತಿಯನ್ನು ನಿಕ್ಸನ್‍ಡಿಸೋಜ ಪಡೆದರು. ಕಾರ್ಯಕ್ರಮವನ್ನು ಸಂತ ಅನ್ನಮ್ಮ ದೇವಾಲಯದ ಧರ್ಮಗುರುಗಳಾದ ಮದಲೈ ಮುತ್ತು ಧ್ವಜಾರೋಹಣ ಮಾಡಿ ಪ್ಯಾರೀಸ್ ಡೇಗೆ ಚಾಲನೆ ನೀಡಿದರು.

ಈ ಸಂದರ್ಭ ಸಹಾಯಕ ಧರ್ಮ ಗುರುಗಳಾದ ರೆ:ಫಾ: ರೋಶನ್ ಬಾಬು ಹಾಗೂ ಕನ್ಯಾ ಸ್ತ್ರೀಯರು, ಸಂಘದ ಕಾರ್ಯದರ್ಶಿ ಬೆನಡಿಕ್ಟ್ ಸಾಲ್ಡಾನ, ಕ್ರೈಸ್ತ ಸ್ನೇಹಿತರ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ ಸಬಾಸ್ಟೀನ್ ಕ್ಷೇವಿಯರ್ ಕಾರ್ಯದರ್ಶೀ ಜೂಡಿವಾಜ್ ಹಾಗೂ ಪದಾಧಿಕಾರಿಗಳು, ಉಪನ್ಯಾಸಕ ಚಾಲ್ರ್ಸ್ ಡಿಸೋಜ ಉಪಸ್ಥಿತರಿದ್ದರು. ವಿನೋದ್, ಜೀವನ್ ಲೋಬೊ, ಹಾಗೂ ರಾಜು ರೈ