ಗೋಣಿಕೊಪ್ಪ ವರದಿ, ಜ. 19: ತಮ್ಮದೇ ಆದ ಪರಿಕಲ್ಪನೆಯಲ್ಲಿ ತೋಟಗಾರಿಕೆ ಬೆಳೆಯಿಂದ ಉದ್ಯಮ ಆರಂಭಿಸಲು ಯುವಜನತೆ ಮುಂದೆ ಬರಬೇಕು ಎಂದು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ಬಿಇಎಸ್‍ಎಸ್ ಹಾರ್ಟಿಕಲ್ಟರ್ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸಿ. ಕೆ. ನಾರಾಯಣ್ ಸಲಹೆ ನೀಡಿದರು.
ಇಲ್ಲಿನ ಕೃಷಿ ವಿಜ್ಞಾನ ಸಭಾಂಗಣದಲ್ಲಿ ಕೃಷಿ ವಿಜ್ಞಾನ ಕೇಂದ್ರ, ಐ.ಸಿ.ಎ.ಆರ್ ಹಾಗೂ ಐ.ಐ.ಎಚ್.ಆರ್ ಸಹಯೋಗದಲ್ಲಿ ಆಯೋಜಿಸಿದ್ದ ಯುವ ಜನತೆಗೆ ನವೋದ್ಯಮ ಅಭಿವೃಧ್ಧಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಬೀಜ ಉತ್ಪಾದನೆ, ನರ್ಸರಿ, ತಂತ್ರಜ್ಞಾನ, ಯಂತ್ರೋಪಕರಣ, ವಿವಿಧ ಹಣ್ಣುಗಳ ಜ್ಯೂಸ್ ತಯಾರಿಕೆ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಯೋಜನೆಗಳಿಗೆ ಪರವಾನಗಿ ನೀಡುವ ಮೂಲಕ ಮಾರುಕಟ್ಟೆ ಅಭಿವೃದ್ಧಿ, ನಮ್ಮಲ್ಲಿ ಪಡೆದ ಪರವಾನಗಿಯಿಂದ ಆನ್‍ಲೈನ್ ಮೂಲಕವೂ ಮಾರಾಟಕ್ಕೆ ಅವಕಾಶ ನೀಡಲಾಗುವುದು ಎಂದರು.
ಯುವ ಕೃಷಿಕನ ಕೌಶಲ್ಯ ಅಭಿವೃದ್ಧಿಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಉತ್ತಮ ಚಿಂತನೆಯ ಉದ್ಯಮ ಬೆಳೆದಷ್ಟು ಸಂಶೋಧನೆಗಳು ಕೂಡ ಹೆಚ್ಚಾಗುತ್ತಿದೆ. ಕೃಷಿ ಅಭಿವೃಧ್ಧಿ, ಆಹಾರ ಉದ್ಯಮ ಹೆಚ್ಚಾಗಲಿದೆ ಎಂದರು.
ಕಾರ್ಯಕ್ರಮದ ಮುಂದಾಳು, ಕೃಷಿ ಪಂಡಿತ ಸೋಮೇಂಗಡ ಗಣೇಶ್ ತಿಮ್ಮಯ್ಯ ಮಾತನಾಡಿ, ತಾವು ಬೆಳೆದ ಬೆಳೆಯ ಲಾಭ ಮಧÀ್ಯವರ್ತಿಗಳ ಪಾಲಾಗುತ್ತಿರುವುದು ಕೃಷಿಕನಿಗೆ ಲಾಭದ ಪ್ರಮಾಣ ಕಡಿಮೆ ಯಾಗುವಂತಾಗಿದೆ. ಇದರ ನಿಯಂತ್ರಣಕ್ಕೆ ತೋಟಗಾರಿಕಾ ಬೆಳೆಗಳಿಂದ ತಯಾರಿಸಬಹುದಾದ ಆಹಾರ ಉತ್ಪನ್ನಗಳನ್ನು ಸ್ವ ಉದ್ಯಮದ ಮೂಲಕ ಮಾರಾಟ ಮಾಡಿಕೊಂಡು ಯಾರ ಹಂಗಿಲ್ಲದೆ ಬೆಳೆಯಲು ಯುವಜನತೆ ಮುಂದೆ ಬರಬೇಕಿದೆ ಎಂದರು.
ಗೋಣಿಕೊಪ್ಪ ಪ್ರೆಸ್‍ಕ್ಲಬ್ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಮಾತನಾಡಿ, ನವೋದÀ್ಯಮದಿಂದ ಏಕಬೆಳೆ ಪದ್ಧತಿಯಿಂದ ಕೃಷಿಕರು ಹೊರಬರಲು ಸಹಕಾರಿಯಾಗಲಿದೆ. ಸಂಶೋಧನೆಗಳು ಹೆಚ್ಚಾಗಲಿವೆÉ. ವಿವಿಧ ವೃತ್ತಿಯಲ್ಲಿರುವವರು ಕೃಷಿ ಮೂಲಕ್ಕೆ ಆದ್ಯತೆ ನೀಡುವುದರಿಂದ ಆಹಾರ ಉದ್ಯಮಕ್ಕೆ ಪ್ರೋತ್ಸಾಹ ಸಿಗಲಿದೆ ಎಂದರು.
ಹಿರಿಯ ಬೆಳೆಗಾರ ಪುಚ್ಚಿಮಾಡ ಲಾಲಾ ಪೂಣಚ್ಚ ಮಾತನಾಡಿ, ಪಾಲಕರು ಮಕ್ಕಳಿಗೆ ಕೃಷಿಯಲ್ಲಿ ತೊಡಗಿಕೊಳ್ಳುವಂತೆ ಸಲಹೆ ನೀಡಬೇಕು ಎಂದರು. ಕೆವಿಕೆ ಮುಖ್ಯಸ್ಥ ಡಾ. ಸಾಜು ಜಾರ್ಜ್ ಮಾತನಾಡಿ, ಕೃಷಿ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಕೊಳ್ಳುವುದು ಉತ್ತಮ ಎಂದರು. ಬಿಇಎಸ್‍ಎಸ್‍ಟಿ ಯೋಜನೆಯ ಸಂಯೋಜಕ ಬಿ.ಎಸ್. ವೈಭವ್ ಯೋಜನೆಯಿಂದಾಗುವ ಪ್ರಯೋಜನಗಳ ಮಾಹಿತಿ ನೀಡಿದರು. ಡಾ. ಪ್ರಭಾಕರ್ ಕಾರ್ಯಕ್ರಮ ನಿರೂಪಿಸಿದರು.