ಸೋಮವಾರಪೇಟೆ, ಜ. 19: ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆಭಾಷೆ ಗೌಡ ಸಮಾಜದ ನೂತನ ಅಧ್ಯಕ್ಷರಾಗಿ ಕಡ್ಲೇರ ಎಲ್. ಹೊನ್ನಪ್ಪ ಆಯ್ಕೆಯಾಗಿದ್ದಾರೆ.
ಯಡವಾರೆ ಗ್ರಾಮದಲ್ಲಿ ತೊತ್ತ್ಯನ ಕೇಶವಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಮೂಲೆಮಜಲು ಎಂ. ಮನೋಜ್‍ಕುಮಾರ್, ಗೌರವಾಧ್ಯಕ್ಷರು ಹಾಗೂ ಕಾನೂನು ಸಲಹೆಗಾರರಾಗಿ ವಕೀಲ ಪೊನ್ನಚ್ಚನ ಕೆ. ಗಣಪತಿ, ಕಾರ್ಯದರ್ಶಿಯಾಗಿ ತೆಕ್ಕಡೆ ಜೆ. ಸಂದೇಶ್, ಖಜಾಂಚಿಯಾಗಿ ಮೂಲೆಮಜಲು ಪಿ. ಜಯಕುಮಾರ್ ಆಯ್ಕೆಯಾದರು. ನಿರ್ದೇಶಕರುಗಳಾಗಿ 12 ಮಂದಿಯನ್ನು ಆಯ್ಕೆ ಮಾಡಲಾಯಿತು.