ಸೋಮವಾರಪೇಟೆ, ಜ. 19: ಸಮೀಪದ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಜಾತ್ರೋತ್ಸವದ ಸಮಾರೋಪ ಸಮಾರಂಭ ದೇವಾಲಯ ಸಮಿತಿ ಅಧ್ಯಕ್ಷ ರಘುಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಕಳೆದ ತಾ. 13 ರಿಂದ ತಾ. 17 ರವರೆಗೂ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು. ಬೆಳ್ಳಿ ಬಂಗಾರ ದಿನದಂದು ಪ್ರಾರ್ಥನಾ ಪೂಜೆಯೊಂದಿಗೆ ವಿಧ್ಯುಕ್ತ ಚಾಲನೆಗೊಂಡಿದ್ದ 61ನೇ ವರ್ಷದ ಜಾತ್ರೋತ್ಸವಕ್ಕೆ ತಾ. 17 ರಂದು ಮಂಗಳ ಪ್ರಾರ್ಥನೆಯ ಮೂಲಕ ವಿಧ್ಯುಕ್ತ ತೆರೆ ಎಳೆಯಲಾಯಿತು.

ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ: ಜಾತ್ರೋತ್ಸವ ಅಂಗವಾಗಿ ಶ್ರೀಕುಮಾರಲಿಂಗೇಶ್ವರ ಯುವಕ ಸಂಘದಿಂದ ಆಯೋಜಿಸಲಾಗಿದ್ದ ವಿವಿಧ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಪುರುಷರ ಕಬಡ್ಡಿ ಪಂದ್ಯಾಟದಲ್ಲಿ ಸೋಮವಾರಪೇಟೆಯ ಒಕ್ಕಲಿಗರ ಯುವ ವೇದಿಕೆ ಪ್ರಥಮ ಹಾಗೂ ಜೆಬಿಎಸ್‍ಸಿ ತಂಡ ದ್ವಿತೀಯ ಸ್ಥಾನ ಪಡೆಯಿತು.

ಮಹಿಳೆಯರಿಗೆ ಆಯೋಜಿಸಿದ್ದ ಥ್ರೋಬಾಲ್ ಪಂದ್ಯಾಟದಲ್ಲಿ ಮರಗೋಡು ಯುವತಿ ಮಂಡಳಿ ಪ್ರಥಮ, ಕುಶಾಲನಗರದ ಕೂರ್ಗ್ ಗಲ್ರ್ಸ್ ತಂಡ ದ್ವಿತೀಯ ಸ್ಥಾನ ಪಡೆಯಿತು.

ಪುರುಷರ ಹಗ್ಗಜಗ್ಗಾಟದಲ್ಲಿ ಅರುಣ್ ಫ್ರೆಂಡ್ಸ್-ಬಿ. ಪ್ರಥಮ, ಅರುಣ್ ಫ್ರೆಂಡ್ಸ್-ಎ. ದ್ವಿತೀಯ ಸ್ಥಾನ ಪಡೆಯಿತು. ಮಹಿಳಾ ವಿಭಾಗದಲ್ಲಿ ಹಾನಗಲ್ಲು ಶೆಟ್ಟಳ್ಳಿಯ ಸರಸ್ವತಿ ಯುವತಿ ಮಂಡಳಿ ಪ್ರಥಮ, ಕುಮಾರಲಿಂಗೇಶ್ವರ ಯುವತಿ ಮಂಡಳಿ ದ್ವಿತೀಯ ಸ್ಥಾನ ಪಡೆಯಿತು.

ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಪ್ರೊ ಕಬಡ್ಡಿ ಆಟಗಾರ ಪ್ರಶಾಂತ್ ರೈ, ಮಾಜೀ ಸೈನಿಕ ಬಸವರಾಜ್ ಅವರುಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ತಾ.ಪಂ. ಮಾಜೀ ಅಧ್ಯಕ್ಷ ಕೆ.ಎಂ. ಲೋಕೇಶ್, ಕೊಡಗು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಉಪಾಧ್ಯಕ್ಷ ಎಂ.ಎಸ್. ದೇವರಾಜ್, ಮಲೆನಾಡು ಯೂತ್ ಅಸೋಸಿಯೇಷನ್ ಅಧ್ಯಕ್ಷ ಯಶವಂತ್ ಬೆಳ್ಳಿಗೌಡ, ಕುಮಾರಲಿಂಗೇಶ್ವರ ಯುವಕ ಸಂಘದ ಅಧ್ಯಕ್ಷ ಕೆ.ಎಸ್. ಮಧು, ಉಪಾಧ್ಯಕ್ಷ ಜಗತ್, ಕಾರ್ಯದರ್ಶಿ ಕೆ.ಕೆ. ಸಂಜಯ್, ಖಜಾಂಚಿ ಕಿರಣ್‍ಕುಮಾರ್, ಕಬಡ್ಡಿ ಆಟಗಾರ ಎಸ್.ಆರ್. ಉತ್ತಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.