ಗೋಣಿಕೊಪ್ಪಲು, ಜ.16: ಹಾತೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೈಕೇರಿ ಗ್ರ್ರಾಮದಲ್ಲಿರುವ ರೋಟರಿ ಸಭಾಂಗಣಕ್ಕೆ ತೆರಳುವ ರಸ್ತೆಯನ್ನು ಅಭಿವೃದ್ದಿ ಪಡಿಸಿ ಡಾಂಬರೀಕರಣ ಮಾಡಲಾಗಿದ್ದು; ಈ ರಸ್ತೆಯನ್ನು ಡಾ.ಅಪ್ಪನೆರವಂಡ ಸೋನಿಯಾ ಮಂದಪ್ಪ ಉದ್ಘಾಟಿಸಿದರು. ಗೋಣಿಕೊಪ್ಪ ರೋಟರಿ ಕ್ಲಬ್‍ನ ಅಧ್ಯಕ್ಷ ಕಾಡ್ಯಮಾಡ ಬಿ.ನೇವಿನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಟ್ರಸ್ಟ್ ಚೇರ್ಮನ್ ಡಾ. ಚಂದ್ರಶೇಖರ್ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಸಿ.ಕೆ ಬೋಪಣ್ಣ ಮಾತನಾಡಿದರು.

ಕಾರ್ಯಕ್ರಮದಲ್ಲಿ ಗೋಣಿಕೊಪ್ಪ ರೋಟರಿಯನ್ ಕಾರ್ಯದರ್ಶಿ ತಾಣಚ್ಚೀರ ಪೂಣಚ್ಚ,ರೋಟರಿ ಮಾಜಿ ಅಧ್ಯಕ್ಷ ಚೆರಿಯಪಂಡ ಇಮ್ಮಿಉತ್ತಪ್ಪ, ಕೋಳೇರ ಜಮುನ ತಿಮ್ಮಯ್ಯ, ಪಿ.ಬಿ.ಪೂಣಚ್ಚ, ರೋಟೇರಿಯನ್ ಅರುಣ್ ತಮ್ಮಯ್ಯ, ಕೆ.ಸಿ.ಮುತ್ತಪ್ಪ ಎಂ.ಎಂ.ಗಣಪತಿ,ಮುದ್ದಪ್ಪ, ಪ್ರಮೋದ್ ಕಾಮತ್, ನರೇನ್, ಕಿಶೋರ್ ಮಾದಪ್ಪ, ತೀತಮಾಡ ಮೋಹನ್, ಮುಂತಾದವರು ಉಪಸ್ಥಿತರಿದ್ದರು. ಸುಮಿ ಸುಬ್ಬಯ್ಯ ಪ್ರಾರ್ಥಿಸಿದರು. ಕಾರ್ಯದರ್ಶಿ ತಾಣಚ್ಚೀರ ಪೂಣಚ್ಚ ಸ್ವಾಗತಿಸಿ ವಂದಿಸಿದರು.