ಮಡಿಕೇರಿ, ಜ. 16: ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು ಜಿಲ್ಲೆಯ ಪ್ರಮುಖ ತರಬೇತಿ ಸಂಸ್ಥೆಯಾಗಿದ್ದು, ಪ್ರಸ್ತುತ 2020-21ನೇ ಸಾಲಿನಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಪ್ರಾರಂಭ ಮಾಡಲು ಭಾರತ ಸರ್ಕಾರದ ಕೃಷಿ ಕೌಶಲ್ಯ ಸಂಸ್ಥೆ ಅನುಮೋದನೆ ನೀಡಿದ್ದು, ಆಸಕ್ತ 18 ವರ್ಷ ಮೇಲ್ಪಟ್ಟ ಯುವಕ-ಯುವತಿಯರು, ರೈತರು ಮತ್ತು ರೈತ ಮಹಿಳೆಯರು ಭಾಗವಹಿಸಬಹುದು.
ನರ್ಸರಿ ಕೆಲಸಗಾರ 25 ದಿನಗಳು 20 ಶಿಬಿರಾರ್ಥಿಗಳು, ಅಣಬೆ ಬೇಸಾಯ 25 ದಿನಗಳು 20 ಶಿಬಿರಾರ್ಥಿಗಳಿಗೆ ಅವಕಾಶವಿದೆ. ಶಿಬಿರಾರ್ಥಿಗಳಿಗೆ ಉಚಿತ ತರಬೇತಿಯನ್ನು ಮುಂದಿನ ಫೆಬ್ರವರಿ ತಿಂಗಳಿನಲ್ಲಿ ಪ್ರಾರಂಭಿಸಲಾಗುವುದು. ಆಯ್ಕೆ ಮಾಡಿಕೊಂಡ ಯಾವುದಾದರು ಒಂದು ವಿಷಯವನ್ನು 25 ದಿನಗಳ ಕಾಲ ತರಬೇತಿ ನೀಡಿ ನಂತರ ಉತ್ತೀರ್ಣರಾದವರಿಗೆ ಕೇಂದ್ರ ಸರ್ಕಾರದ ವತಿಯಿಂದ ಕೌಶಲ್ಯಾಭಿವೃದ್ಧಿ ಪ್ರಮಾಣ ಪತ್ರ ನೀಡಲಾಗುವುದು.
ಆಸಕ್ತಿಯುಳ್ಳವರು ಎರಡು ಪಾಸ್‍ಪೊರ್ಟ್ ಅಳತೆಯ ಫೋಟೊ, ವಿದ್ಯಾರ್ಹತೆ ವಿವರ ಮತ್ತು ಆಧಾರ್ ಕಾರ್ಡ್ ದಾಖಲೆಗಳೊಂದಿಗೆ ತಾ. 24 ರೊಳಗೆ ಕಚೇರಿಗೆ ನೇರವಾಗಿ ಬಂದು ತಲಪಿಸಬೇಕೆಂದು ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು ಪತ್ರಿಕಾ ಪ್ರಕಟಣೆÉಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕಚೇರಿ ಸಂಖ್ಯೆ 08274- 247274 ಅಥವಾ ಸಂಪನ್ಮೂಲ ವ್ಯಕ್ತಿಗಳಾದ ಪ್ರಭಾಕರ್ (7259240293), ಡಾ. ಸೋಮ್‍ಶೇಖರ್ (9448349726) ಸಂಪರ್ಕಿಸಲು ತಿಳಿಸಲಾಗಿದೆ.