ಮಡಿಕೇರಿ, ಜ. 18: ರಾಜ್ಯಸಭಾ ಸದಸ್ಯ ಕುಪ್ಪೇಂದ್ರ ರೆಡ್ಡಿ ಅವರು ಕಕ್ಕಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇಗುಲಕ್ಕೆ ಭೇಟಿ ನೀಡಿ ಪೂಜಾ ಕಾರ್ಯ ನೆರವೇರಿಸಿದರು. ಬಳಿಕ ದೇವಾಲಯದ ಈಶಾನ್ಯ ಭಾಗದ ಪೌಳಿ ಕಾಮಗಾರಿಯನ್ನು ಪರಿಶೀಲಿಸಿದರು. ಈಗಾಗಲೇ ಪಾಡಿ ಶ್ರೀ ಇಗ್ಗುತ್ತಪ್ಪ ಭಕ್ತ ಜನಸಂಘಕ್ಕೆ ರೂ. 50 ಲಕ್ಷ ನೀಡುವದಾಗಿ ತಿಳಿಸಿದ ಕುಪ್ಪೇಂದ್ರ ರೆಡ್ಡಿ ಅವರು, ರೂ. 25 ಲಕ್ಷ ಬಿಡುಗಡೆ ಗೊಳಿಸಿದ್ದಾರೆ. ಸಂಸದರ ನಿಧಿಯಿಂದಲೂ ರೂ. 20 ಲಕ್ಷ ಒದಗಿಸಿಕೊಡುವುದಾಗಿ ತಿಳಿಸಿದ್ದಾರೆಂದು ಭಕ್ತ ಜನಸಂಘದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.
ಭೇಟಿ ಸಂದರ್ಭ ಆಡಳಿತ ಮಂಡಳಿಯವರು ಹಾಜರಿದ್ದರು.