ಕೂಡಿಗೆ, ಜ. 17: ಹಾರಂಗಿ ಅಣೆಕಟ್ಟೆಯಿಂದ ಬೇಸಿಗೆ ಬೆಳೆಗೆ ನೀರನ್ನು ಹರಿಸುವಂತೆ ಈ ಭಾಗದ 12 ಗ್ರಾಮದ ರೈತರ ಒತ್ತಾಯವಾಗಿದೆ. ಹಾರಂಗಿಯಲ್ಲಿ ಅಣೆಕಟ್ಟೆ ಪ್ರಾರಂಭವಾದಾಗಿನಿಂದಲೂ ಒಂದಲ್ಲ ಒಂದು ಕಾರಣ ಹೇಳುತ್ತಾ ಬೇಸಿಗೆ ಬೆಳೆಗೆ ವ್ಯವಸಾಯ ಮಾಡಲು ನೀರನ್ನು ಒದಗಿಸಲಾಗಿಲ್ಲ.

ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಕಳೆದ ವರ್ಷಗಳಿಗಿಂತಲೂ ಹೆಚ್ಚು ಇರುವುದರಿಂದ ಬೇಸಾಯ ಮಾಡಲು ನೀರನ್ನು ಮುಖ್ಯ ನಾಲೆಗಳಲ್ಲಿ ಹರಿಸಬೇಕೆಂದು ಈ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶಗಳಾದ ಹುದುಗೂರು, ಮಾದಲಾಪುರ, ಕೂಡಿಗೆ, ಹೆಬ್ಬಾಲೆ, ತೂರೆನೂರು, ಶಿರಂಗಾಲ ಸೇರಿದಂತೆ 8 ಉಪಗ್ರಾಮಗಳ ನೀರು ಬಳಕೆದಾರ ಸಂಘದ ಅಧ್ಯಕ್ಷರು ಹಾಗೂ ರೈತರು ಆಗ್ರಹಿಸಿದ್ದಾರೆ.