ಮಡಿಕೇರಿ, ಜ. 18: ತಂಬಾಕು ಸೇವನೆ ತಡೆಗಟ್ಟಲು ಹಾಗೂ ತಂಬಾಕು ಸೇವನೆಯಿಂದ ಆದ ರೋಗಗಳ ತಪಾಸಣೆ ಹಾಗೂ ರೋಗ ನಿರ್ಣಯ ಕೈಗೊಳ್ಳುವ ನಿಟ್ಟಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಜೊತೆಯಲ್ಲಿ ಕೊಡಗು ದಂತ ವೈದ್ಯಕೀಯ ಸಂಸ್ಥೆಯ ವತಿಯಿಂದ ವೀರಾಜಪೇಟೆಯಲ್ಲಿನ ಕೂರ್ಗ್ ಪಾಲಿಕ್ಲಿನಿಕ್, ಎಫ್.ಎಂ.ಸಿ. ರೋಡ್, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಮತ್ತು ಖಾಸಾಗಿ ಬಸ್ ನಿಲ್ದಾಣಗಳಲ್ಲಿ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರದಲ್ಲಿ ಸುಮಾರು 300ಕ್ಕೂ ಹೆಚ್ಚು ತಂಬಾಕು ಸೇವಿಸುವ ಜನರನ್ನು ಪರೀಕ್ಷಿಸಿ ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಯಿತು. ಇದೇ ನಿಟ್ಟಿನಲ್ಲಿ ತಂಬಾಕು ಮುಕ್ತ ಕೊಡಗು ಎಂಬ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗಿದೆ.