ಮಡಿಕೇರಿ, ಜ. 18: ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೆ, ಶಿಕ್ಷಣ ಕ್ಷೇತ್ರದ ಬಗ್ಗೆ ಇರುವ ಕನ್ನಡದ ಕೃತಿಗಳಿಗೆ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ನೀಡಲು ಸಂಸ್ಥೆ ತೀರ್ಮಾನಿಸಿದೆ.

ಶಿಕ್ಷಣಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಾಕಾರದ ಅಥವಾ ವಿಷಯವನ್ನೊಳಗೊಂಡ ಕನ್ನಡದ ಕೃತಿಯ ಎರಡು ಪ್ರತಿ, ಲೇಖಕರ ಪರಿಚಯ ಮತ್ತು 2 ಪಾಸ್‍ಪೋರ್ಟ್ ಅಳತೆಯ ಫೋಟೋದೊಂದಿಗೆ ಸ್ಪರ್ಧೆಗೆ ಕಳುಹಿಸಲು ಕೋರಿದೆ.

50 ವರ್ಷ ಮೇಲ್ಪಟ್ಟ ಲೇಖಕರು, ಶಿಕ್ಷಣ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ಕನ್ನಡದ ಪುಸ್ತಕ ಬರೆದಿದ್ದರೆ, ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ತಾವು ಬರೆದಿರುವ ಕೃತಿಗಳಲ್ಲಿ ಕನಿಷ್ಟ 10ಕ್ಕೂ ಕೃತಿಗಳು ಹಾಗೂ ತಮ್ಮಲ್ಲಿ ಲಭ್ಯವಿರುವ ಕೃತಿಗಳನ್ನು ವಿಶ್ವೇಶ್ವರಯ್ಯ ಗ್ರಂಥಾಲಯಕ್ಕೆ ಕೊಡುವ ಮೂಲಕ, ಈ ಪ್ರಶಸ್ತಿಯ ಗೌರವಕ್ಕೆ ಭಾಜನರಾಗಬಹುದು. ಲೇಖಕರ ಬಯೋಡಾಟಾ ಮತ್ತು 2 ಪಾಸ್‍ಪೋರ್ಟ್ ಅಳತೆಯ ಫೋಟೋದೊಂದಿಗೆ, ಜೀವಮಾನ ಸಾಧನೆ ಪ್ರಶಸ್ತಿಗೆ ಮನವಿ ಕಳುಹಿಸಬಹುದು.

ಕೃತಿಗಳನ್ನು ರಮೇಶ್ ಸುರ್ವೆ, ಅಧ್ಯಕ್ಷರು, ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ನಂ. 468/ಸುರ್ವೆ, 13ನೇ ಮುಖ್ಯರಸ್ತೆ, 3ನೇ ಹಂತ, ಮಂಜುನಾಥನಗರ, ಬೆಂಗಳೂರು - 560010, ಮೊಬೈಲ್: 9845307327 ಈ ವಿಳಾಸಕ್ಕೆ ಕಳುಹಿಸಬಹುದು.