ಕುಶಾಲನಗರ, ಜ. 14: ಕುಶಾಲನಗರ ಇನ್ನರ್‍ವೀಲ್ ಕ್ಲಬ್ ಮತ್ತು ಕೊಡಗು ಪೆÇಲೀಸ್ ಇಲಾಖೆ ಜಂಟಿಯಾಗಿ ಹಮ್ಮಿಕೊಂಡಿದ್ದ 31ನೇ ರಾಷ್ಟ್ರೀಯ ರಸ್ತೆ ಸುರಕ್ಷಾ ಬೈಕ್ ಜಾಥಾಕ್ಕೆ ಡಿವೈಎಸ್ಪಿ ಶೈಲೇಂದ್ರ ಚಾಲನೆ ನೀಡಿದರು. ಜಾಥಾವು ಕೂಡ್ಲುರು, ಗುಮ್ಮನಕೊಲ್ಲಿ, ಬೈಚನಹಳ್ಳಿ ರಥ ಬೀದಿ ಮಾರ್ಗವಾಗಿ ತೆರಳಿ ವಾಹನ ಸವಾರರಿಗೆ ಜಾಗೃತಿ ಮೂಡಿಸಿತು. ವೃತ್ತ ನಿರೀಕ್ಷಕ ಮಹೇಶ್ ಮತ್ತು ಸಂಚಾರಿ ಠಾಣಾಧಿಕಾರಿ ಅಚ್ಚಮ್ಮ, ಇನ್ನರ್ ವಿಲ್ ಕ್ಲಬ್‍ನ ಉಪಾಧ್ಯಕ್ಷೆ ಶಾಲಿನಿ ನರೇಂದ್ರ, ಕಾರ್ಯದರ್ಶಿ ನೇಹಾ ಜಗದೀಶ್, ತೇಜಸ್ವಿನಿ ಗೌತಮ್, ಚಿತ್ರ ರಮೇಶ್, ದಿವ್ಯ ಸುಜಯ್, ಭಾರತಿ, ಅಶ್ವಿನಿರೈ, ರೇಖಾ ಗಂಗಾಧರ, ಮಾಲತಿ ಇದ್ದರು.