ಮಡಿಕೇರಿ, ಜ. 14: 2020ನೇ ಸಾಲಿನ ಜನವರಿ ಮಾಹೆಯಲ್ಲಿ ಎ.ಸಿ.ಬಿ. ದಕ್ಷಿಣ ವಲಯ, ಮೈಸೂರು ವ್ಯಾಪ್ತಿಯ ಎಸಿಬಿ ಠಾಣಾ ವ್ಯಾಪ್ತಿಗಳಲ್ಲಿ ತಾಲೂಕು ಮಟ್ಟದ ಜನಸಂಪರ್ಕ ಸಭೆ ನಡೆಸಲಿದ್ದಾರೆ.
ತಾ. 16 ರಂದು ಸೋಮವಾರಪೇಟೆ ತಾಲೂಕಿನ ಕುಶಾಲನಗರ ಕೊಡ್ಲಿಪೇಟೆ, ತಾ. 17 ರಂದು ವೀರಾಜಪೇಟೆ ತಾಲೂಕಿನ ವೀರಾಜಪೇಟೆ ನಗರ, ಸಿದ್ದಾಪುರ, ಗೋಣಿಕೊಪ್ಪ ಹಾಗೂ ತಾ. 18 ರಂದು ಮಡಿಕೇರಿ ತಾಲೂಕಿನ ಮಡಿಕೇರಿ ನಗರ, ನಾಪೋಕ್ಲು ಮತ್ತು ಭಾಗಮಂಡಲಗಳಲ್ಲಿ ಜನಸಂಪರ್ಕ ಸಭೆ ನಡೆಸಲಿದ್ದಾರೆ ಎಂದು ಮೈಸೂರು ದಕ್ಷಿಣ ವಲಯ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಅಧೀಕ್ಷಕಿ ಜೆ.ಕೆ. ರಶ್ಮಿ ತಿಳಿಸಿದ್ದಾರೆ.