ವೀರಾಜಪೇಟೆ, ಜ. 14: ವೀರಾಜಪೇಟೆ ಉಪ ವಲಯ ಅರಣ್ಯ ವಿಭಾಗವಾದ ಚೇಲಾವರದಲ್ಲಿ ಕಾಡುಕುರಿ ಬೇಟೆಯಾಡಿದ ಇಬ್ಬರನ್ನು ಕೋವಿ ಹಾಗೂ ಮಾಂಸ ಸಹಿತ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಜನಾರ್ಧನ ಹಾಗೂ ಕೆ. ಪೂಣಚ್ಚ ಬಂಧಿತ ಆರೋಪಿಗಳಾಗಿದ್ದಾರೆ.
ಖಚಿತ ಸುಳಿವಿನ ಮೇರೆ ಅಧಿಕಾರಿಗಳು ಪೂಣಚ್ಚ ಅವರ ಮನೆಯನ್ನು ಶೋಧಿಸಿದಾಗ 5 ಕೆ.ಜಿ.ಗೂ ಅಧಿಕ ಕಾಡು ಕುರಿ ಮಾಂಸ ಲಭಿಸಿದ್ದು; ಕೃತ್ಯಕ್ಕೆ ಬಳಸಿದ್ದ ಕೋವಿ ಹಾಗೂ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಎಸಿಎಫ್ ರೋಷಣಿ, ಆರ್‍ಎಫ್‍ಒ ದಿಲೀಪ್ ಕುಮಾರ್, ಅಕ್ಕಮ್ಮ, ರಂಜಿತ್ ಸೋಮಯ್ಯ, ಸಚಿನ್ ನಿಂಬಾಳ್ಕರ್, ಅನಿಲ್ ಚೌಹಾಣ್, ಸಿಬ್ಬಂದಿಗಳಾದ ಮಾಲತೇಶ್, ನಾಗರಾಜ್, ಚಂದ್ರ, ಪೊನ್ನಪ್ಪ, ಭರತ್, ಸುರೇಶ್, ನಾಣಯ್ಯ, ಅಶೋಕ್ ಭಾಗವಹಿಸಿದ್ದರು.