ಮಡಿಕೇರಿ, ಜ. 14: ಕೇಂದ್ರಿಯ ವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿ ಬಿ.ಯು. ವಿಕಾಸ್ ತಾ. 20 ರಂದು ದೆಹಲಿಯಲ್ಲಿ ನಡೆಯುವ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಭಾಗವಹಿಸಲು ಕೊಡಗು ಜಿಲ್ಲೆಯಿಂದ ಆಯ್ಕೆಯಾಗಿದ್ದಾನೆ.

ಈತ ಪೊಲೀಸ್ ಇಲಾಖೆ ಉದ್ಯೋಗಿ ಕಾರುಗುಂದ ಗ್ರಾಮದ ಬೈಚನ ಉತ್ತಪ್ಪ (ಪ್ರಕಾಶ್) ಹಾಗೂ ಬೀನಾ ದಂಪತಿಯ ಪುತ್ರ.