ಮಡಿಕೇರಿ, ಜ. 12: ಕರ್ನಾಟಕ ಸ್ಪೋಟ್ರ್ಸ್ ಡಾನ್ಸ್ ಫೆಡರೇಶನ್, ನ್ಯಾಷನಲ್ ಸ್ಪೋಟ್ರ್ಸ್ ಡಾನ್ಸ್ ಚಾಂಪಿಯನ್ ಶಿಪ್ ವತಿಯಿಂದ ಪಿರಿಯಾಪಟ್ಟಣದ ಶ್ರೀ ಸಾಯಿ ಸಮುದಾಯ ಭವನದಲ್ಲಿ ನಡೆದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯ ಭರತನಾಟ್ಯ ಪ್ರಕಾರದಲ್ಲಿ ಸಬ್ ಜೂನಿಯರ್, ಜೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ಅಮ್ಮತ್ತಿಯ ನಾಟ್ಯಾಂಜಲಿ ನೃತ್ಯ ಸಂಸ್ಥೆಯ ವಿದ್ಯಾರ್ಥಿನಿಯರು 20 ಚಿನ್ನ ಹಾಗೂ 1 ಬೆಳ್ಳಿ ಪದಕವನ್ನು ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ನೃತ್ಯ ಸಂಸ್ಥೆಯ ನಿರ್ದೇಶಕಿ ವಿದುಷಿ ಹೇಮಾವತಿ ಕಾಂತ್‍ರಾಜ್ ತಿಳಿಸಿದ್ದಾರೆ.
ವಿದ್ಯಾರ್ಥಿಗಳಾದ ವೈಷ್ಣವಿ, ಭಾರ್ಗವಿ, ನಿಶಿ ಸರಸ್ವತಿ, ಪ್ರೇಕ್ಷ ಭಟ್, ಗ್ರೀಷ್ಮಾ, ಭೂಮಿಕಾ, ತನಿಷಾ, ಕಾವ್ಯಶ್ರೀ, ಶ್ವೇತಾ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾದವರು.