ಮಡಿಕೇರಿ, ಜ. 12: ಹೊದ್ದೂರು ಶ್ರೀ ಅಯ್ಯಪ್ಪ ದೇವರ ಸನ್ನಿಧಾನದಲ್ಲಿ ಮಕರ ಸಂಕ್ರಾತಿ ಪ್ರಯುಕ್ತ ತಾ. 14 ರಂದು 18ನೇ ವರ್ಷದ ಆರಾಧನೆ ನಡೆಯಲಿದೆ. ಬೆಳಿಗ್ಗೆ ಗಣಪತಿ ಹೋಮ, ಗುರು ಗಣಪತಿ ಪೂಜೆ, ಶ್ರೀ ಅಯ್ಯಪ್ಪ ಸ್ವಾಮಿ ಆರಾಧನೆ, ಮಂಗಳಾರತಿ ಪೂಜಾ ಕಾರ್ಯ ನಡೆಯಲಿದ್ದು, ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿಯ ಅಮ್ಮಣಂಡ ಹಾಗೂ ಐರೀರ ಕುಟುಂಬಸ್ಥರು ತಿಳಿಸಿದ್ದಾರೆ.