ಶನಿವಾರಸಂತೆ, ಜ. 13: ಶನಿವಾರಸಂತೆಯ ಕೇರಳಾಪುರ ಹೊಟೇಲ್ ಮುಂಭಾಗ ಆಟೋ ರಿಕ್ಷಾವೊಂದು ಮಗುಚಿ ಬಿದ್ದು ಅದರೊಳಗಿದ್ದ ಪ್ರಯಾಣಿಕರೊಬ್ಬರು ಗಾಯಗೊಂಡ ಪ್ರಕರಣ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ತ್ಯಾಗರಾಜ ಕಾಲೋನಿಯ ನಿವಾಸಿ ಜಿ.ವಿ. ಮಂಜುನಾಥ ಎಂಬವರು ಶನಿವಾರಸಂತೆಗೆ ಬಂದು ಕೆಲಸ ಮುಗಿಸಿ, ಮಹಂತಪ್ಪ ಎಂಬವರ ಆಟೋ ರಿಕ್ಷಾದಲ್ಲಿ ತ್ಯಾಗರಾಜ ಕಾಲೋನಿಗೆ ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ.