ಸೋಮವಾರಪೇಟೆ, ಜ.13: ಶ್ರೀ ರವಿಶಂಕರ್ ಗುರೂಜಿಯವರ ಮಾರ್ಗದರ್ಶನದಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ವತಿಯಿಂದ ಫೆ.1 ರಂದು ಬೆಳಿಗ್ಗೆ 6 ರಿಂದ 7.30 ರವರೆಗೆ ಸಮೀಪದ ಹೊನ್ನಮ್ಮನ ಕೆರೆ ದಡದಲ್ಲಿ ರಥಸಪ್ತಮಿ ಪ್ರಯುಕ್ತ 108 ಸೂರ್ಯ ನಮಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಶಿಕ್ಷಕಿ ರಾಗಿಣಿ ತಿಳಿಸಿದ್ದಾರೆ.
ಈ ಪ್ರಯುಕ್ತ ಇದೇ ತಿಂಗಳ ತಾ. 19 ರಿಂದ 31ರ ವರೆಗೆ ಬೆಳಗ್ಗೆ 5.30 ರಿಂದ 6.30 ಮತ್ತು ಸಂಜೆ 5.30 ರಿಂದ 6.30ರವರೆಗೆ ಸೋಮವಾರಪೇಟೆ ಪಟ್ಟಣದಲ್ಲಿರುವ ಆಯುಷ್ ಇಲಾಖೆಯ ಹೋಮಿಯೋಪತಿ ಸಭಾಂಗಣದಲ್ಲಿ ಸೂರ್ಯನಮಸ್ಕಾರ ಅಭ್ಯಾಸ ವರ್ಗ ಆಯೋಜಿಸಲಾಗಿದೆ. ಆಸಕ್ತರು ಶಿಬಿರದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ಮೊ: 9945987717ನ್ನು ಸಂಪರ್ಕಿಸಬಹುದಾಗಿದೆ ಎಂದು ರಾಗಿಣಿ ಮಾಹಿತಿ ನೀಡಿದ್ದಾರೆ.