ಮಡಿಕೇರಿ, ಜ.11: ನಗರದ ಜಮಾತುಲ್ ಮುಸ್ಲಿಮೀನ್ ಜಾಮಿಯ ಮಸ್ಜಿದ್ ವತಿಯಿಂದ ತಾ.12 ರಂದು (ಇಂದು) ಎಎಲ್ಜಿ ಕ್ರೆಸೆಂಟ್ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.
ಬೆಳಗ್ಗೆ 10 ಗಂಟೆಯಿಂದ 2.30 ರವರೆಗೆ ಶಿಬಿರ ನಡೆಯಲಿದ್ದು, ಮೈಸೂರಿನ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯಕೀಯ ತಂಡ ಆರೋಗ್ಯ ತಪಾಸಣೆ ನಡೆಸಲಿದೆ. ಸ್ತ್ರೀರೋಗ ಮತ್ತು ಪ್ರಸೂತಿ, ದಂತ ಚಿಕಿತ್ಸೆ, ಕೀಲು ಮತ್ತು ಮೂಳೆ ಸೇರಿದಂತೆ ವಿವಿಧ ರೋಗಗಳನ್ನು ತಪಾಸಣೆ ಮಾಡಲಾಗುವುದು ಎಂದು ಜಾಮಿಯ ಮಸ್ಜಿದ್ ನ ಕಾರ್ಯದರ್ಶಿ ಯು. ಇಮ್ರಾನ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 8217419811, 9972641782ನ್ನು ಸಂಪಕಿಶಬಹುದಾಗಿದೆ.