ಕುಶಾಲನಗರ, ಜ 10: ಕಾವೇರಿ ನದಿ ಶುದ್ಧೀಕರಣ ಮತ್ತು ಪುನಶ್ಚೇತನಕ್ಕಾಗಿ ತಕ್ಷಣ ಕ್ರಿಯಾ ಯೋಜನೆ ರೂಪಿಸಿ ವರದಿ ಸಲ್ಲಿಸುವಂತೆ ರಾಜ್ಯ ಹೈಕೋರ್ಟ್ ಸರಕಾರಕ್ಕೆ ನಿರ್ದೇಶನ ನೀಡಿದೆ. ಭಾಗಮಂಡಲದಲ್ಲಿ ಮೇಲ್ಸೇತುವೆ ನಿರ್ಮಾಣ ಯೋಜನೆ ಪ್ರಶ್ನಿಸಿ ಹಾಗೂ ಕಾವೇರಿ ನದಿ ಶುದ್ಧೀಕರಣಕ್ಕೆ ಯೋಜನೆ ರೂಪಿಸಲು ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ಭಾಗಮಂಡಲದ ಉದ್ಯಮಿ ಎಸ್.ಇ. ಜಯಂತ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆದು ಹೈಕೋರ್ಟ್ ಪೀಠ ಈ ಆದೇಶ ಹೊರಡಿಸಿದೆ.ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ವೋಕ್ ಹಾಗೂ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್

(ಮೊದಲ ಪುಟದಿಂದ) ಅವರ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿದೆ. ಕಾವೇರಿ ನದಿ ಶುದ್ಧೀಕರಣ ಹಾಗೂ ಪುನಶ್ಚೇತನದ ಬಗ್ಗೆ 2019 ರ ಜೂನ್ 28 ರಂದು ಹೈಕೋರ್ಟ್ ಸರಕಾರಕ್ಕೆ ನಿರ್ದೇಶನ ನೀಡಿತ್ತು. ಈ ಸಂಬಂಧ ಸರಕಾರ ಆದೇಶ ಪಾಲನೆ ಮಾಡದ ಹಿನೆÀ್ನಲೆಯಲ್ಲಿ ಜನವರಿ 30 ರ ಒಳಗಾಗಿ ಕ್ರಿಯಾಯೋಜನೆ ರೂಪಿಸುವಂತೆ ನಿರ್ದೇಶಿಸಿದೆ.

ಕಾವೇರಿ ನದಿ ಮಲಿನವಾಗದಂತೆ ನೋಡಿಕೊಳ್ಳುವುದು ಸರಕಾರದ ಹೊಣೆಯಾಗಿದ್ದು ಈ ನಿಟ್ಟಿನಲ್ಲಿ ಹೈಕೋರ್ಟ್ ತಾಕೀತು ಮಾಡಿದೆ. ಸಂಗಮದ ಬಳಿ ಕನ್ನಿಕೆ ಮತ್ತು ಕಾವೇರಿ ನದಿಯ ವ್ಯಾಪ್ತಿಯಲ್ಲಿ 10 ಅಡಿ ಅಗಲ ನದಿಯನ್ನು ವಿಸ್ತರಿಸುವುದು, 6 ಅಡಿ ಆಳದಲ್ಲಿ ಹೂಳೆತ್ತುವುದು ಈ ಮೂಲಕ ನದಿಯ ಅಸ್ತಿತ್ವವವನ್ನು ಉಳಿಸುವಂತೆ ಅರ್ಜಿದಾರರು ಸಾರ್ವಜನಿಕ ಹಿತಾಸಕ್ತಿ ಮೇರೆಗೆ ಹೈಕೋರ್ಟ್ ಮೊರೆ ಹೋಗಿದ್ದು ಭಾಗಮಂಡಲದ ಮೂಲದ ಹೈಕೋರ್ಟ್ ವಕೀಲರಾದ ಮೊಟ್ಟನ ಸಿ.ರವಿಕುಮಾರ್ ಅವರು ವಾದ ಮಂಡಿಸಿ ಭಾಗಮಂಡಲ ವ್ಯಾಪ್ತಿಯ ನದಿಯ ವಾಸ್ತವಾಂಶದ ದಾಖಲೆಗಳನ್ನು ಒದಗಿಸಿದ್ದರು. ಕಾವೇರಿ ನದಿಗೆ ಅಡ್ಡಲಾಗಿ ಭಾಗಮಂಡಲದ ಬಳಿ ಮಡಿಕೇರಿ - ತಲಕಾವೇರಿ ಹಾಗೂ ನಾಪೋಕ್ಲು - ತಲಕಾವೇರಿ ರಸ್ತೆಗೆ ಸಂಪರ್ಕ ಕಲ್ಪಿಸಲು ರೂ.28.08 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ 2017 ಅಕ್ಟೋಬರ್ 28 ರಂದು ಸರಕಾರ ಟೆಂಡರ್ ಕರೆದಿತ್ತು. ನಂತರ ಕಾಮಗಾರಿ ಚಾಲನೆಗೊಂಡಿದ್ದು ಸೇತುವೆಗೆ ಅಂದಾಜು 90 ಪಿಲ್ಲರ್‍ಗಳು ನಿರ್ಮಾಣವಾಗಬೇಕಾಗಿದ್ದು ಈಗಾಗಲೆ 15 ಪಿಲ್ಲರ್‍ಗಳ ಕಾಮಗಾರಿ ನಡೆದಿದೆ. ಇದನ್ನು ಪ್ರಶ್ನಿಸಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಲಾಗಿದ್ದು ಭಾಗಮಂಡಲ-ತಲಕಾವೇರಿಗೆ ಬರುವ ಪ್ರವಾಸಿಗರಿಂದ ಕಾವೇರಿ, ಕನ್ನಿಕೆ ಮತ್ತು ಗುಪ್ತಗಾಮಿನಿ ಸುಜ್ಯೋತಿ ನದಿಗಳು ಮಲಿನ ಆಗುತ್ತಿವೆ. ಭಾಗಮಂಡಲ ಪಟ್ಟಣ ವ್ಯಾಪ್ತಿಯ ಚರಂಡಿ ನೀರು ಮತ್ತು ತ್ಯಾಜ್ಯಗಳನ್ನು ನದಿಗೆ ಹರಿಸಲಾಗುತ್ತದೆ.

ಈ ನಡುವೆ ಸರಕಾರ ಮೇಲ್ಸೇತುವೆ ಯೋಜನೆ ಕೈಗೆತ್ತಿಕೊಂಡಿದ್ದು ನದಿಗಳು ಮತ್ತಷ್ಟು ಮಲಿನವಾಗಲಿವೆ ಹಾಗೂ ಸುತ್ತಲಿನ ಪರಿಸರದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಅರ್ಜಿಯಲ್ಲಿ ದೂರಲಾಗಿತ್ತು.

ಭಾಗಮಂಡಲ ವ್ಯಾಪ್ತಿಯಲ್ಲಿ ನದಿಯ ಹೂಳೆತ್ತಲು ಮತ್ತು ಒಳಚರಂಡಿ ಯೋಜನೆಗೆ ಅನುದಾನವನ್ನು ಸರಕಾರ ಕಲ್ಪಿಸಿದರೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಯಾವುದೇ ರೀತಿಯ ಕ್ರಮಕೈಗೊಳ್ಳದ ಹಿನೆÉÀ್ನಲೆಯಲ್ಲಿ ಹೈಕೋರ್ಟ್ ನಿಗಮದ ಅಧಿಕಾರಿಗಳಿಗೆ ಛೀಮಾರಿ ಹಾಕಿದೆ.

ನದಿ ಮಲಿನವಾಗುವುದನ್ನು ತಡೆಯಲು ವಿಸ್ತøತ ಯೋಜನಾ ವರದಿ ಸಿದ್ಧಪಡಿಸುವುದಾಗಿ ಸರಕಾರ ಈ ಹಿಂದೆ ಘೋಷಣೆ ಮಾಡಿದ್ದು ಇದಕ್ಕೆ ನ್ಯಾಯಾಲಯದಿಂದ ಕಾಲಾವಕಾಶ ಕೂಡ ನೀಡಲಾಗಿತ್ತು. ಇದೀಗ ಫೆ.2 ಕೊನೆಯ ದಿನವಾಗಿದ್ದು, ಅದರೊಳಗೆ ಯೋಜನಾ ವರದಿ ಸಲ್ಲಿಸಬೇಕು ಎಂದು ಹೈಕೋರ್ಟ್ ಅಧಿಕಾರಿಗಳಿಗೆ ತಾಕೀತು ಮಾಡಿದೆ.

ಡಿಪಿಆರ್ ಸಲ್ಲಿಸಲು ಮತ್ತಷ್ಟು ಕಾಲಾವಕಾಶ ನೀಡಲು ಸರಕಾರಿ ವಕೀಲರು ಮಾಡಿದ ಮನವಿಯನ್ನು ನ್ಯಾಯಪೀಠ ತಳ್ಳಿಹಾಕಿದೆ ಎಂದು ವಕೀಲ ರವಿಕುಮಾರ್ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಸರಕಾರದಿಂದ ಕೊಡಗು ಜಿಲ್ಲಾಧಿಕಾರಿಗಳ ಕಛೇರಿಗೆ ನದಿ ಸ್ವಚ್ಛತೆಯ ಬಗ್ಗೆ ಕ್ರಿಯಾಯೋಜನೆ ರೂಪಿಸುವ ನಿಟ್ಟಿನಲ್ಲಿ ತಕ್ಷಣ ಸಮಗ್ರ ಯೋಜನೆ ಸಿದ್ಧಪಡಿಸಿ ಕೂಡಲೇÉ ವರದಿ ಸಲ್ಲಿಸುವಂತೆ ಆದೇಶ ಬಂದಿರುವುದಾಗಿ ‘ಶಕ್ತಿ’ಗೆ ಕಛೇರಿ ಮೂಲಗಳು ತಿಳಿಸಿವೆ. ನೀರಾವರಿ ನಿಗಮ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಮಾಹಿತಿ ಒದಗಿಸಿದ್ದಾರೆ.