ಮಡಿಕೇರಿ, ಜ. 10: ಹೊದ್ದೂರು ಶ್ರೀ ಅಯ್ಯಪ್ಪ ದೇವರ ಸನ್ನಿಧಾನದಲ್ಲಿ 18ನೇ ವರ್ಷದ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ತಾ. 14 ರಂದು ಶ್ರೀ ಅಯ್ಯಪ್ಪ ಸ್ವಾಮಿ ಆರಾಧನೆ ನಡೆಯಲಿದೆ.
ಅಂದು ಬೆಳಿಗ್ಗೆ ಗಣಪತಿ ಹೋಮ, ಗುರುಗಣಪತಿ ಪೂಜೆ, ಶ್ರೀ ಅಯ್ಯಪ್ಪ ಸ್ವಾಮಿ ಆರಾಧನೆ, ಮಂಗಳಾರತಿ ಪೂಜಾ ಕಾರ್ಯ ನಡೆಯಲಿದ್ದು, ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಾಲಯ ಆಡಳಿತ ಮಂಡಳಿಯ ಅಮ್ಮಞಂಡ ಹಾಗೂ ಐರೀರ ಕುಟುಂಬಸ್ಥರು ತಿಳಿಸಿದ್ದಾರೆ.