ಕಡಂಗ, ಜ. 10: ಕಡಂಗ ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಾದ ಕರಡ, ಜೌಕಿ ಮತ್ತು ಬೊಳ್ಳುಮಾಡು ಗ್ರಾಮದ ಕ್ರೀಡಾಪಟುಗಳನ್ನು ಒಳಗೊಂಡು ವಾರ್ಷಿಕವಾಗಿ ನಡೆಸಲ್ಪಡುವ 5ನೇ ವರ್ಷದ ಕೆಪಿಎಲ್ ಪಂದ್ಯಾಟಗಳು ಫೆಬ್ರವರಿ 29 ಮತ್ತು ಮಾರ್ಚ್ 1 ರಂದು ಕಡಂಗದ ಸರ್ಕಾರಿ ಶಾಲೆಯ ಮೈದಾನದಲ್ಲಿ ನಡೆಸಲಾಗುವುದೆಂದು ಕ್ರೀಡಾಕೂಟದ ಅಧ್ಯಕ್ಷ ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ನೆಲ್ಲಚಂಡ ಕಿರಣ್ ಕಾರ್ಯಪ್ಪ ತಿಳಿಸಿದ್ದಾರೆ. ಕ್ರೀಡಾಕೂಟದಲ್ಲಿ ಒಟ್ಟು 8 ಬಲಿಷ್ಠ ತಂಡಗಳು ಪಾಲ್ಗೊಂಡು ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳಿಗೆ ತಲಪುವ ತಂಡಕ್ಕೆ ಆಕರ್ಷಕ ಟ್ರೋಫಿ ಹಾಗೂ ನಗದು ನೀಡಲಾಗುವುದೆಂದು ತಿಳಿಸಿದ್ದಾರೆ. ಪಾಲ್ಗೊಳ್ಳುವ ಎಲ್ಲಾ ಕ್ರೀಡಾಪಟುಗಳಿಗೆ ವೈಯಕ್ತಿಕ ಪಾರಿತೋಷಕ ನೀಡಲಾಗುವುದು. ಕಳೆದ ವರ್ಷ ಶಾಲೆಯಲ್ಲಿ ಅತ್ಯುತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದೆಂದು ತಿಳಿಸಿದರು. ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ಇಕ್ಕು, ಷರೀಫ್, ಕರೀಮ್, ನೌಷಾದ್ ಫ್ರೀಡಂ ಇದ್ದರು.