ಕಣಿವೆ, ಜ.10 : ಕಾಡಾನೆಗಳ ಹಿಂಡು ಧಾಳಿ ನಡೆಸಿದ ಪರಿಣಾಮ ಹೆಬ್ಬಾಲೆ ಬಳಿಯ ಮರೂರು ಗ್ರಾಮದ ಪ್ರಗತಿಪರ ರೈತ ಎಚ್.ಎಸ್.ಮಹೇಶ್ ಎಂಬವರಿಗೆ ಸೇರಿದ ನಾಲ್ಕು ಎಕರೆ ವಿಸ್ತೀರ್ಣದಲ್ಲಿ ಬೆಳೆದಿದ್ದ ಅಡಿಕೆ ಬೆಳೆ ನಾಶವಾಗಿದೆ. ಗುರುವಾರ ರಾತ್ರಿ ಗ್ರಾಮಕ್ಕೆ ನುಗ್ಗಿದ ಕಾಡಾನೆಗಳು ಹಸಿವು ನೀಗಿಸಿಕೊಳ್ಳಲು ಅಡಿಕೆ ತೋಟಕ್ಕೆ ಧಾಳಿಯಿಟ್ಟು ಎಳೆಯ ಅಡಿಕೆ ಗಿಡಗಳನ್ನು ತಿಂದು ತುಳಿದು ನೆಲಸಮ ಮಾಡಿವೆ. ಇದರಿಂದ ಲಕ್ಷಾಂತರ ರೂಗಳ ನಷ್ಟ ಸಂಭವಿಸಿದೆ ಎಂದು ರೈತ ಮಹೇಶ್ ದೂರಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳು ಕಾಡಂಚಿನಲ್ಲಿ ಶಾಶ್ವತವಾದ ಸೋಲಾರ್À ಬೇಲಿ ಅಳವಡಿಸಿ ಅರಣ್ಯದೊಳಗೆ ಕಾಡಾನೆಗಳಿಗೆ ಲಭ್ಯವಾಗುವ ಸೊಪ್ಪು, ಗಿಡ, ಮರಗಳನ್ನು ಬೆಳೆದರೆ ಕಾಡಾನೆಗಳು ಗ್ರಾಮಕ್ಕೆ ಧಾಳಿ ಇಡುವುದು ತಪ್ಪುತ್ತದೆ. ನಮಗೆ ಕಾಡಾನೆಗಳಿಂದ ಉಂಟಾಗಿರುವ ನಷ್ಟವನ್ನು ಇಲಾಖೆಯ ಅಧಿಕಾರಿಗಳು ಭರಿಸಬೇಕು ಎಂದು ಮಹೇಶ್ ಒತ್ತಾಯಿಸಿದ್ದಾರೆ.