ಶನಿವಾರಸಂತೆ, ಜ. 9: ಇಲ್ಲಿನ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ ಮಹಮ್ಮದ್ ಗೌಸ್ ಅಧ್ಯಕ್ಷತೆಯಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮದ ಪ್ರಥಮ ಸಭೆ ನಡೆಯಿತು.
ಸಭೆಯಲ್ಲಿ ಕೃಷಿ, ಪಶುವೈದ್ಯ, ಅರಣ್ಯ, ಕಂದಾಯ, ನ್ಯಾಯಬೆಲೆ, ಶಿಕ್ಷಣ, ವಿದ್ಯುತ್ ಒಟ್ಟು 7 ಇಲಾಖೆಗಳಿಗೆ ಸಂಬಂಧಿಸಿದ ನೌಕರರು ಮಾತ್ರ ಹಾಜರಾಗಿದ್ದು; ತಮ್ಮ ಇಲಾಖೆಗಳ ಮಾಹಿತಿಗಳನ್ನು ಸಭೆಯಲ್ಲಿ ತಿಳಿಸಿದರು. ಹೇಳಿಕೆ ಮುಗಿಯುತ್ತಿದ್ದಂತೆ ಆಡಳಿತ ಮಂಡಳಿಗೆ ಕೈ ಮುಗಿದು ಸಭೆಯಿಂದ ನಿರ್ಗಮಿಸಿದರು.
ನೌಕರರ ನಿರ್ಗಮನದಿಂದ ಅಸಮಾಧಾನಗೊಂಡ ಸದಸ್ಯ ಸರ್ದಾರ್ ಅಹಮ್ಮದ್ ಮಾತನಾಡಿ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಗಳಲ್ಲಿ ಜನಪ್ರತಿನಿಧಿಗಳೊಂದಿಗೆ ನಡೆಯುತ್ತಿದ್ದ ಕೆಡಿಪಿ ಸಭೆ ಈಗಿನ ಸರ್ಕಾರದಿಂದಾಗಿ ಗ್ರಾಮ ಪಂಚಾಯಿತಿಯಲ್ಲೂ ನಡೆಯು ವಂತಾಗಿದೆ. ಆದರೆ; ಪಂಚಾಯಿತಿ ಯಲ್ಲಿ ನಡೆದ ಪ್ರಥಮ ಸಭೆಗೆ 7 ಇಲಾಖೆಗಳ ಹೊರತಾಗಿ ಉಳಿದ ಇಲಾಖೆಗಳ ಅಧಿಕಾರಿಗಳು ಗೈರುಹಾಜರಾಗಿದ್ದಾರೆ. ಕಾರ್ಯಕ್ರಮ ಯಶಸ್ವಿಯಾಗಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಗೈರು ಹಾಜರಾಗಿರುವ ಅಧಿಕಾರಿಗಳ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಕಳುಹಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿ ಮುಂದಿನ ಸಭೆಗಾದರೂ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಜರಾಗಬಹುದು. ಜನಪ್ರತಿನಿಧಿ ಗಳೊಂದಿಗೆ ಅಭಿವೃದ್ಧಿ ಕಾರ್ಯದ ಬಗ್ಗೆ ಚರ್ಚಿಸಬಹುದು ಎಂದು ಸರ್ದಾರ್ ಅಹಮ್ಮದ್ ಆಗ್ರಹಿಸಿ ದರು. ಉಪಾಧ್ಯಕ್ಷತೆ ಗೀತಾ, ಸದಸ್ಯರಾದ ಉಷಾ, ಹೇಮಾವತಿ, ರಜನಿ, ಆದಿತ್ಯಗೌಡ, ಎಚ್.ಆರ್. ಹರೀಶ್‍ಕುಮಾರ್, ಎಸ್.ಎನ್. ಪಾಂಡು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್.ಜೆ. ಮೇದಪ್ಪ, ಕಾರ್ಯದರ್ಶಿ ತಮ್ಮಯ್ಯಾಚಾರ್, ಸಿಬ್ಬಂದಿ ವಸಂತ್, ಫೌಜಿಯಾ ಉಪಸ್ಥಿತರಿದ್ದರು.