ಶನಿವಾರಸಂತೆ, ಜ. 9: ಶನಿವಾರಸಂತೆ ಸಮೀಪದ ಗೋಪಾಲಪುರ ಗ್ರಾಮದ ಶ್ರೀ ಬನಶಂಕರಿ ಅಮ್ಮನವರ ದೇವಾಲಯದಲ್ಲಿ ದೇವಾಂಗ ಸಂಘದ ವತಿಯಿಂದ ತಾ. 10 ರಂದು (ಇಂದು) ಬನದ ಹುಣ್ಣಿಮೆ ಮಹೋತ್ಸವÀ ನಡೆಯಲಿದೆ.

ಬೆಳಿಗ್ಗೆ 8 ರಿಂದ ಮಹಾಗಣಪತಿ, ಶ್ರೀ ವೀರಭದ್ರೇಶ್ವರ ಸ್ವಾಮಿ ಹಾಗೂ ನವಗ್ರಹ ಪೂಜಾ, ಅಮ್ಮನವರಿಗೆ ಫಲಪಂಚಾಮೃತ ಅಭಿಷೇಕ, ದುರ್ಗಾಸೂಕ್ತ, ಸೂಕ್ತ ಜಲಾಭಿಷೇಕ, ಅಲಂಕಾರ ಸೇವೆ ನಡೆಯಲಿದೆ. 10 ಗಂಟೆಗೆ ಮಹಾಗಣಪತಿ, ನವಗ್ರಹ, ಮೃತ್ಯುಂಜಯ, ದುರ್ಗಾ ವಾಸ್ತು ಪೂಜೆ ಹಾಗೂ ಹೋಮ ನಡೆಯಲಿದೆ. 12 ಗಂಟೆಗೆ ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗವಿರುತ್ತದೆ. ಪೂಜಾ ಕಾರ್ಯಕ್ರಮಗಳು ಅರ್ಚಕ ಎನ್.ಕೆ. ಮೋಹನ್ ನೇತೃತ್ವದಲ್ಲಿ ನಡೆಯಲಿವೆ ಎಂದು ದೇವಾಲಯ ಸಮಿತಿ ಹಾಗೂ ದೇವಾಂಗ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.