ಗೋಣಿಕೊಪ್ಪಲು, ಜ. 9: ಗೋಣಿಕೊಪ್ಪಲು ಸಮೀಪದ ಹಾತೂರು ಗ್ರಾಮ ಪಂಚಾಯಿತಿಗೆ ಒಳಪಡುವ ಕೈಕೇರಿ ಗ್ರಾಮದ ವೇದಾಪಂಡ ಕುಟುಂಬಸ್ಥರ ಮನೆಗೆ ಹೋಗುವ ರಸ್ತೆ ಅಭಿವೃದ್ಧಿಗೆ ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ ಚಾಲನೆ ನೀಡಿದರು. ಜಿಲ್ಲಾ ಪಂಚಾಯಿತಿಯ ಶಾಸನಬದ್ದ ಅನುದಾನದಲ್ಲಿ ಈ ರಸ್ತೆ ಕಾಮಗಾರಿ ನಡೆಸಲಾಗುತ್ತಿದೆ. ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಸಂದರ್ಭ ಗ್ರಾಮಸ್ಥರಾದ ವೇದಾಪಂಡ ಬಿದ್ದಪ್ಪ, ತಾರಾ, ಪೂರ್ಣಿಮ, ರೇಖಾ, ಪೊನ್ನಮ್ಮ, ಆಪ್ತ ಸಹಾಯಕ ಜಪ್ಪು ಸುಬ್ಬಯ್ಯ ಮುಂತಾದವರು ಹಾಜರಿದ್ದರು.