ಮಡಿಕೇರಿ, ಜ. 9: ಕಳಂಕ ರಹಿತ ಪಾರದರ್ಶಕ ಆಡಳಿತವನ್ನು ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಸಿಎಎ ಮತ್ತು ಎನ್‍ಆರ್‍ಸಿ ವಿಚಾರವನ್ನು ಮುಂದಿಟ್ಟುಕೊಂಡು ರಾಷ್ಟ್ರದಲ್ಲಿ ಗೊಂದಲದ ವಾತಾವರಣ ವನ್ನು ಸೃಷ್ಟಿಸಿವೆ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ಅಪ್ಪಚಟ್ಟೋಳಂಡ ಮನುಮುತ್ತಪ್ಪ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವÀರು, ಲೋಕಸಭೆÉ ಮತ್ತು ರಾಜ್ಯ ಸಭೆಯಲ್ಲಿ ಸಿಎಎಯನ್ನು ಬಹುಮತ ದೊಂದಿಗೆ ಅಂಗೀಕರಿಸಲಾಗಿದೆ. ಆ ಸಂದರ್ಭ ಪರೋಕ್ಷವಾಗಿ ಕಾಯ್ದೆಯನ್ನು ಬೆಂಬಲಿಸಿದ್ದ ಕಾಂಗ್ರೆಸ್, ಬಳಿಕ ಮೌನಕ್ಕೆ ಶರಣಾಗಿ ಇದೀಗ ಅದನ್ನು ಅನುಷ್ಟಾನಗೊಳಿಸುವ ಹಂತದಲ್ಲಿ ಮುಸ್ಲಿಂ ಸಮುದಾಯವನ್ನು ಕಾಯ್ದೆಯ ವಿರುದ್ಧ ಎತ್ತಿಕಟ್ಟುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಾ ಬರುತ್ತಿದೆ ಎಂದು ಆರೋಪಿಸಿದರು.

ಸ್ವಾತಂತ್ರ್ಯಾ ನಂತರದಿಂದಲೂ ಹಿಂದು ಮತ್ತು ಮುಸಲ್ಮಾನರನ್ನು ಒಗ್ಗಟ್ಟಾಗಲು ಬಿಡದ ಕಾಂಗ್ರೆಸ್, ಒಡೆದು ಆಳುವ ನೀತಿಯನ್ನು ಅನುಸರಿಸಿ ಕೊಂಡು ಬಂದಿದೆ ಎಂದು ಟೀಕಿಸಿದರು.

ಸಂವಿಧಾನದ ಆಶಯಗಳ ಮಿತಿಯಲ್ಲೆ ಪೌರತ್ವ ಕಾಯ್ದೆ ಇದ್ದು, ಇದು ವಿಶ್ವದ ಎಲ್ಲಾ ರಾಷ್ಟ್ರಗಳಲ್ಲೂ ಇದೆ. ಯಾವುದೇ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ನುಸುಳುಕೋರರಿಗೆ ಕಠಿಣ ಶಿಕ್ಷೆಯನ್ನು ವಿಧಿಸುವ ಮೂಲಕ, ನುಸುಳುಕೋರರನ್ನು ತಡೆಗಟ್ಟಲಾಗುತ್ತಿದೆ ಯೆಂದು ತಿಳಿಸಿದ ಮನು ಮುತ್ತಪ್ಪ, ಭಾರತದಲ್ಲೂ ಇತ್ತೀಚಿನ ವರ್ಷಗಳಲ್ಲಿ ಅಕ್ರಮ ನುಸುಳುವಿಕೆ, ಭಯೋತ್ಪಾದÀನೆ ಮುಂತಾದ ಚಟುವಟಿಕೆಗಳು ಹೆಚ್ಚಾಗಿದ್ದು, ಇದನ್ನು ನಿಯಂತ್ರಿಸುವಲ್ಲಿ ಈ ಕಾಯ್ದೆ ಹೆಚ್ಚು ಪರಿಣಾಮಕಾರಿ ಯಾಗಲಿದೆಯೆಂದು ಹೇಳಿದರು.

ಪೌರತ್ವ ಕಾಯ್ದೆಯನ್ನು ಇದೇ ಮೊದಲ ಬಾರಿಗೆ ಬಿಜೆಪಿ ಜಾರಿಗೆ ತರುತ್ತಿಲ್ಲ. ಈ ಹಿಂದೆ ಕಾಂಗ್ರೆಸ್ ಆಡಳಿತದಲ್ಲೂ ಹಲವು ಬಾರಿ ಈ ಕಾಯ್ದೆಯನ್ನು ತಿದ್ದುಪಡಿಗೆ ಒಳಪಡಿಸಲಾಗಿದೆ. ಅದಕ್ಕೆ ಪೂರಕವಾದ ದಾಖಲೆಗಳು ಮತ್ತು ಅದರ ಪರವಾಗಿ ಮಾತನಾಡಿರುವ ವಿಪಕ್ಷಗಳ ಪ್ರಮುಖರ ಬಗ್ಗೆ ಅಗತ್ಯ ದಾಖಲೆಗಳನ್ನು ಬಿಜೆಪಿ ಹೊಂದಿದೆ. ಬಿಜೆಪಿ ಎಂದಿಗೂ ದೇಶದ 17 ಕೋಟಿ ಮುಸಲ್ಮಾನರಿಗೆ ಪೌರತ್ವ ನೀಡುವುದಿಲ್ಲ ಎಂದು ಎಲ್ಲೂ ಹೇಳಿಲ್ಲವೆಂದರು.

ಇದೀಗ ಪೌರತ್ವ ಕಾಯ್ದೆಯ ಕುರಿತು ದೇಶದ ಜನರಿಗೆ ಸತ್ಯಾಂಶವನ್ನು ತಿಳಿಸುವ ಕಾಲ ಬಂದಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ಮನೆ ಮನೆಗೆ ಭೇಟಿ ನೀಡಿ, ಕಾಯ್ದೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದೆ. ಜೊತೆಗೆ ಕಾಯ್ದೆಯನ್ನು ಬೆಂಬಲಿಸವವರು ಮೊಬೈಲ್ ಸಂಖ್ಯೆ 8866288662ಕ್ಕೆ ಮಿಸ್ಡ್ ಕಾಲ್ ಮಾಡುವ ಮೂಲಕ ತಮ್ಮ ಬೆಂಬಲವನ್ನು ಕಾಯ್ದೆಗೆ ನೀಡಬಹುದಾಗಿದೆಯೆಂದು ಮನುಮುತ್ತಪ್ಪ ತಿಳಿಸಿದರು.

ನಾಳೆ ಸಂವಾದ: ಪೌರತ್ವ ಕಾಯ್ದೆಯ ಕುರಿತು ತಾ. 11 ರಂದು ನಗರದ ಬಾಲಭವನದಲ್ಲಿ ‘ಸಂವಾದ’ ಕಾರ್ಯಕ್ರಮವನ್ನು ಆಯೋಜಿಸ ಲಾಗಿದ್ದು, ಇದರಲ್ಲಿ ಜಿಲ್ಲೆಯ ಪ್ರÀಬುದ್ಧ ಹಾಗೂ ಪ್ರಜ್ಞಾವಂತ ನಾಗರಿಕರು ಭಾಗವಹಿಸಬಹುದಾಗಿದೆ. ರಾಜ್ಯದ ವರಿಷ್ಟರು ಈ ಕಾರ್ಯಕ್ರಮದಲ್ಲಿ ಕಾಯ್ದೆಯ ಕುರಿತು ಮಾಹಿತಿ ನೀಡಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಮನು ಮಂಜುನಾಥ್, ನಿಕಟ ಪೂರ್ವ ಅಧ್ಯಕ್ಷ ಮಹೇಶ್ ಜೈನಿ, ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಅನಿತಾ ಪೂವಯ್ಯ ಹಾಗೂ ಸಾಮಾಜಿಕ ಜಾಲ ತಾಣದ ಜಿಲ್ಲಾ ಅಧ್ಯಕ್ಷ ಕಾಳಚಂಡ ಅಪ್ಪಣ್ಣ ಉಪಸ್ಥಿತರಿದ್ದರು.