ಮಡಿಕೇರಿ ಜ. 8: ಮಕ್ಕಂದೂರು ಕೊಡವ ಸಮಾಜದ 2019-20ನೇ ಸಾಲಿನ ಮಹಾಸಭೆ ಮತ್ತು ಪುತ್ತರಿ ಊರೊರ್ಮೆ ಸಮಾರಂಭ ಸಂಭ್ರಮದಿಂದ ನಡೆಯಿತು.

ವಿಧಾನಪರಿಷತ್ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕೊಡವ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕೆಂದು ಕರೆ ನೀಡಿದರು. ಇಂದಿನ ವೇಗದ ಯುಗದಲ್ಲಿ ಮುಂದಿನ ಯುವಪೀಳಿಗೆಗಾಗಿ ಕೊಡವ ಭಾಷೆ, ಸಾಹಿತ್ಯ ಮತ್ತು ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಅನಿವಾರ್ಯತೆ ಎದುರಾಗಿದೆ ಎಂದರು.

ಯುಕೋ ಸಂಘಟನೆಯ ಕೊಡವ ಮಂದ್ ನಮ್ಮೆಯಲ್ಲಿ ಸತತ ನಾಲ್ಕು ಬಾರಿ ಗಟ್ಟಿಮಂದ್ ಪ್ರಶಸ್ತಿ ಹಾಗೂ ಬಾಳುಗೋಡುವಿನಲ್ಲಿ ನಡೆದ ಕೊಡವ ನಮ್ಮೆಯಲ್ಲಿ ಭಾಗವಹಿಸಿ ಅಧಿಕ ಬಹುಮಾನ ಪಡೆದ ವ್ಯಾಲಿ ಡ್ಯೂ ಕಲ್ಚರಲ್ ಅಸೋಷಿಯೇಷನ್‍ನ ಸ್ಥಾಪಕ ಅಧ್ಯಕ್ಷ ಹಾಗೂ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಹಂಚೆಟ್ಟಿರ ಮನು ಮುದ್ದಪ್ಪ ಹಾಗೂ ಸದಸ್ಯರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಸಭಾ ಕಾರ್ಯಕ್ರಮದ ನಂತರ ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾದ ‘ಕೊಡಗ್‍ರ ಸಿಪಾಯಿ’ ಚಲನಚಿತ್ರವನ್ನು ಪ್ರದರ್ಶಿಸಲಾಯಿತು.

ಕೊಡವ ಸಮಾಜದ ಅಧ್ಯಕ್ಷ ನಾಪಂಡ ರವಿಕಾಳಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಂದೂರು ಕೊಡವ ಸಮಾಜದ ಮಾಜಿ ಅಧ್ಯಕ್ಷ ಶಾಂತೆಯಂಡ ಅಚ್ಚಯ್ಯ, ದಾನಿಗಳಾದ ಪಡಿಎಟ್ಟಿರ ಉತ್ತಯ್ಯ, ಕಾರ್ಯದರ್ಶಿ ವಿಶು ಪೆಮ್ಮಯ್ಯ, ಖಜಾಂಚಿ ತಂಬುಕುತ್ತಿರ ಮನು ಮಂದಣ್ಣ ಹಾಗೂ ಕೊಡವ ಸಮಾಜದ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಮುಕ್ಕಾಟಿರ ತಂಗಮ್ಮ ಪ್ರಾರ್ಥಿಸಿದರು, ಹಂಚೆಟ್ಟಿರ ಸ್ಪರ್ಷ ಮುದ್ದಪ್ಪ, ನಕ್ಸ್ ತಿಮ್ಮಯ್ಯ, ಸ್ಪಂದನ ಬೊಳ್ಳಮ್ಮ ಸ್ವಾಗತ ನೃತ್ಯ ಮಾಡಿದರು. ಸಮಾಜ ಬಾಂಧವರಿಂದ ನಡೆದ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ಗಮನ ಸೆಳೆದವು.