ಶ್ರೀಮಂಗಲ, ಜ.7: ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರಿಗೆ 10 ಹೆಚ್.ಪಿ ವರೆಗಿನ ಪಂಪ್ ಸೆಟ್‍ಗಳಿಗೆ ಉಚಿತ ವಿದ್ಯುತ್ ನೀಡಲು ಕೂಡಲೇ ಕ್ರಮ ಮತ್ತು ಕಾಳು ಮೆಣಸು ಬೆಳೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ವ್ಯಾಪ್ತಿಯ ಸೆಸ್‍ನಿಂದ ಮುಕ್ತಗೊಳಿಸಬೇಕೆಂದು ಕೊಡಗು ಬೆಳೆಗಾರರ ಒಕ್ಕೂಟ ಸರಕಾರವನ್ನು ಒತ್ತಾಯಿಸಿದೆ.
ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ನಡೆದ ಒಕ್ಕೂಟದ ನೂತನ ಆಡಳಿತ ಮಂಡಳಿ ರಚನೆ ನಂತರ ಒಕ್ಕೂಟದ ಅಧ್ಯಕ್ಷ ಕೈಬಿಲೀರ ಹರೀಶ್‍ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಕಾಫಿ ಬೆಳೆಗಾರರ ಒತ್ತಾಯದ ಮೇರೆಗೆ ಕೊಡಗು ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಕೊಡಗು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ 10 ಹೆಚ್.ಪಿ. ವರೆಗಿನ ಕಾಫಿ ಕೃಷಿಗೆ ಬೇಕಾದ ಉಚಿತ ವಿದ್ಯುತ್‍ಚ್ಛಕ್ತಿಯನ್ನು ನೀಡುವ ಭರವಸೆಯನ್ನು ನೀಡಿದ್ದರು. ತದನಂತರ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸೂಚನೆ ಮೇರೆಗೆ ರಾಜ್ಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ವಿದ್ಯುತ್ಛಕ್ತಿ ಮಂಡಳಿಗೆ ಪತ್ರ ಬರೆದು ಈ ಒಂದು ಸೌಲಭ್ಯವನ್ನು ಅನುಷ್ಠಾನಗೊಳಿಸಲು ಪತ್ರಬರೆದಿ ದ್ದಾರೆ. ಆದರೆ ಇದುವರೆಗೂ ಇದು ಕಾರ್ಯಗತವಾಗಿಲ್ಲ. ಕೂಡಲೇ ಕೆ.ಇ.ಆರ್.ಸಿ. ಇದನ್ನು ಕಾರ್ಯ ಗತಗೊಳಿಸಿ ಆದೇಶ ಮಾಡಬೇಕಾಗಿ ಕೊಡಗು ಬೆಳೆಗಾರರ ಒಕ್ಕೂಟ ಸಭೆಯಲ್ಲಿ ಒತ್ತಾಯ ಕೇಳಿಬಂದಿತು.
ಶ್ರೀಮಂಗಲ, ಜ.7: ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರಿಗೆ 10 ಹೆಚ್.ಪಿ ವರೆಗಿನ ಪಂಪ್ ಸೆಟ್‍ಗಳಿಗೆ ಉಚಿತ ವಿದ್ಯುತ್ ನೀಡಲು ಕೂಡಲೇ ಕ್ರಮ ಮತ್ತು ಕಾಳು ಮೆಣಸು ಬೆಳೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ವ್ಯಾಪ್ತಿಯ ಸೆಸ್‍ನಿಂದ ಮುಕ್ತಗೊಳಿಸಬೇಕೆಂದು ಕೊಡಗು ಬೆಳೆಗಾರರ ಒಕ್ಕೂಟ ಸರಕಾರವನ್ನು ಒತ್ತಾಯಿಸಿದೆ.
ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ನಡೆದ ಒಕ್ಕೂಟದ ನೂತನ ಆಡಳಿತ ಮಂಡಳಿ ರಚನೆ ನಂತರ ಒಕ್ಕೂಟದ ಅಧ್ಯಕ್ಷ ಕೈಬಿಲೀರ ಹರೀಶ್‍ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಕಾಫಿ ಬೆಳೆಗಾರರ ಒತ್ತಾಯದ ಮೇರೆಗೆ ಕೊಡಗು ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಕೊಡಗು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ 10 ಹೆಚ್.ಪಿ. ವರೆಗಿನ ಕಾಫಿ ಕೃಷಿಗೆ ಬೇಕಾದ ಉಚಿತ ವಿದ್ಯುತ್‍ಚ್ಛಕ್ತಿಯನ್ನು ನೀಡುವ ಭರವಸೆಯನ್ನು ನೀಡಿದ್ದರು. ತದನಂತರ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸೂಚನೆ ಮೇರೆಗೆ ರಾಜ್ಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ವಿದ್ಯುತ್ಛಕ್ತಿ ಮಂಡಳಿಗೆ ಪತ್ರ ಬರೆದು ಈ ಒಂದು ಸೌಲಭ್ಯವನ್ನು ಅನುಷ್ಠಾನಗೊಳಿಸಲು ಪತ್ರಬರೆದಿ ದ್ದಾರೆ. ಆದರೆ ಇದುವರೆಗೂ ಇದು ಕಾರ್ಯಗತವಾಗಿಲ್ಲ. ಕೂಡಲೇ ಕೆ.ಇ.ಆರ್.ಸಿ. ಇದನ್ನು ಕಾರ್ಯ ಗತಗೊಳಿಸಿ ಆದೇಶ ಮಾಡಬೇಕಾಗಿ ಕೊಡಗು ಬೆಳೆಗಾರರ ಒಕ್ಕೂಟ ಸಭೆಯಲ್ಲಿ ಒತ್ತಾಯ ಕೇಳಿಬಂದಿತು. ಅಲ್ಲಿಯವರೆಗೆ ಎಲ್ಲಾ ಬೆಳೆಗಾರರು 10 ಹೆಚ್.ಪಿ. ವರೆಗೆ ವಿದ್ಯುತ್ ಬಿಲ್ ಪಾವತಿಸದಂತೆ ಬೆಳೆಗಾರರ ಒಕ್ಕೂಟ ಸೂಚಿಸಿದ್ದು ಇಲಾಖೆಯು, ಈ ಬಗ್ಗೆ ಬಾಕಿ ವಸೂಲಾತಿ ಮತ್ತು ಸಂಪರ್ಕ ಕಡಿತಕ್ಕೆ ಮುಂದಾಗಬಾರದೆಂದು ಒಕ್ಕೂಟ ಆಗ್ರಹಿಸಿದೆ. ಒಂದು ವೇಳೆ ಇಲಾಖೆ ವಸೂಲಾತಿಗೆ ಒತ್ತಾಯ ಮಾಡಿದರೆ ಅಥವಾ ವಿದ್ಯುತ್ ಸಂಪರ್ಕ ಕಡಿತ ಮಾಡಿದರೆ ಒಕ್ಕೂಟದ ಅವಗಾಹನೆಗೆ ತರುವಂತೆ ಮನವಿ ಮಾಡಿದೆ
ಕಾಳುಮೆಣಸು : ಕಾಳುಮೆಣಸು ಮಾರಾಟದ ಮೇಲೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವ್ಯಾಪ್ತಿಯ ಸೆಸ್‍ನಿಂದ ಮುಕ್ತಗೊಳಿಸಿ ಕೊಡಗಿನ ಕಾಳುಮೆಣಸು ಬೆಳೆಗಾರರಿಗೆ ದರ ಕುಸಿತದಿಂದ ಉಂಟಾಗಿರುವ ಸಂಕಷ್ಟದಿಂದ ಚೇತರಿಕೆ ನೀಡುವಂತೆ ಸರಕಾರವನ್ನು ಒಕ್ಕೂಟ ಒತ್ತಾಯಿಸಿದೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸೆಸ್ ವಿಧಿಸುವುದರಿಂದ ಇಂದು ಕೊಡಗು ಸೇರಿದಂತೆ ರಾಜ್ಯದ ಎಲ್ಲಾ ಕಾಳುಮೆಣಸು ಕೇರಳ ರಾಜ್ಯದಿಂದ ಬೆಳೆಯುವ ಬೆಳೆ ಎಂದು ಮಾರಾಟ ಮಾಡಲಾಗುತ್ತಿದೆ. ಇದರಿಂದ ದೇಶದಲ್ಲೇ ಅತಿ ಹೆಚ್ಚು ಕಾಳುಮೆಣಸು ಬೆಳೆಯುವ ಪ್ರದೇಶ ಕರ್ನಾಟಕ ರಾಜ್ಯವಾಗಿದ್ದರೂ, ಕೇರಳ ರಾಜ್ಯ ಇದರ ಲಾಭ ಪಡೆಯುತ್ತಿದೆ. ಇದರ ಪರಿಣಾಮ ಕೇಂದ್ರ ಸರಕಾರದಿಂದ ಸಿಗುವ ಎಲ್ಲಾ ಸಹಾಯಧನ ಮತ್ತು ಸೌಲಭ್ಯ ಕೇರಳ ರಾಜ್ಯದ ಬೆಳೆಗಾರರ ಪಾಲಾಗುತ್ತಿದೆ ನಮ್ಮ ರಾಜ್ಯದ ಬೆಳೆಗಾರರು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತವಾಯಿತು.
ಕಾಫಿ ಬೆಳೆಗಾರರಿಗೆ 10 ಹೆಚ್.ಪಿ. ವರೆಗೆ ಕೃಷಿಯಂತೆ ಉಚಿತ ವಿದ್ಯುತ್ ನೀಡುವ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ಕಾಳುಮೆಣಸಿಗೆ ಸೆಸ್ ಮುಕ್ತಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಶಾಸಕರುಗಳು ಮತ್ತು ಸಂಸದರು ಕಾರ್ಯತತ್ಪರವಾಗುವಂತೆ ಒಕ್ಕೂಟ ಮನವಿ ಮಾಡಿದೆ.
ಅವಿರೋಧ ಆಯ್ಕೆ: ಕೊಡಗು ಬೆಳೆಗಾರ ಒಕ್ಕೂಟದ ಮಹಾಸಭೆಯಲ್ಲಿ ಮುಂದಿನ ಅವಧಿಗೆ ಅವಿರೋಧವಾಗಿ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಬಾಡಗರಕೇರಿಯ ಕೈಬಿಲೀರ ಹರೀಶ್‍ಅಪ್ಪಯ್ಯ, ಉಪಾಧ್ಯಕ್ಷರುಗಳಾಗಿ ಅಮ್ಮತ್ತಿಯ ಕೇಚಂಡ ಶಿವಪ್ಪ ಕುಶಾಲಪ್ಪ, ನಾಪೋಕ್ಲುವಿನ ಡಾ. ಸಣ್ಣುವಂಡ ಕಾವೇರಪ್ಪ, ಪ್ರಧಾನ ಕಾರ್ಯದರ್ಶಿ ಯಾಗಿ ಪೊರಾಡು ಗ್ರಾಮದ ಅಣ್ಣೀರ ಹರೀಶ್‍ಮಾದಪ್ಪ, ಜಂಟಿ ಕಾರ್ಯದರ್ಶಿಯಾಗಿ ಶ್ರೀಮಂಗಲದ ಬಾಚಂಗಡ ದಾದ ದೇವಯ್ಯ, ಕಾರ್ಯದರ್ಶಿಯಾಗಿ ಕುಟ್ಟದ ಬೊಳ್ಳೇರ ರಾಜ ಸುಬ್ಬಯ್ಯ, ಖಜಾಂಚಿಯಾಗಿ ಟಿ. ಶೆಟ್ಟಿಗೇರಿಯ ಮಾಣೀರ ವಿಜಯ್‍ನಂಜಪ್ಪ, ತಾಂತ್ರಿಕ ಸಲಹೆಗಾರರಾಗಿ ತಿತಿಮತಿಯ ಚೆಪ್ಪುಡೀರ ಶೆರಿಸುಬ್ಬಯ್ಯ, ಪಾಲಿಬೆಟ್ಟದ ಡಾ. ಅಜ್ಜಿನಿಕಂಡ ವಾಸು ಗಣಪತಿ, ಒಕ್ಕೂಟದ ಮಹಿಳಾ ಘಟಕಕ್ಕೆ ಬಿ.ಶೆಟ್ಟಿಗೇರಿಯ ಕಡೇಮಾಡ ಕುಸುಮ ಜೋಯಪ್ಪ, ಮತ್ತು ಹುದಿಕೇರಿಯ ತೀತೀರ ಊರ್ಮಿಳಾ ಸೋಮಯ್ಯ ಅವರನ್ನು ಆಯ್ಕೆ ಮಾಡಲಾಯಿತು. ನೂತನ ಆಡಳಿತ ಮಂಡಳಿಯು ಜಿಲ್ಲಾ ಮಟ್ಟದಲ್ಲಿ ವ್ಯವಹರಿಸಲು ಮಹಾಸಭೆಯಲ್ಲಿ ಅಧಿಕಾರ ನೀಡಲಾಯಿತು.
ಚೇಂದಂಡ ಸುಮಿ ಸುಬ್ಬಯ್ಯ ಪ್ರಾರ್ಥಿಸಿ, ಆಡಳಿತ ಮಂಡಳಿ ವರದಿಯನ್ನು ಕಾರ್ಯದರ್ಶಿ ಹರೀಶ್‍ಮಾದಪ್ಪ, ಲೆಕ್ಕಪತ್ರವನ್ನು ಖಜಾಂಚಿ ವಿಜಯ್‍ನಂಜಪ್ಪ ಮಹಾಸಭೆಯಲ್ಲಿ ಮಂಡಿಸಿದರು. ಮಹಾಸಭೆಗೆ ಕ್ಯಾಂಪ್ಕೊ ಸಂಘಟನೆಯ ಕೆ.ಕೆ. ವಿಶ್ವನಾಥ್, ಬೆಳೆಗಾರರ ಒಕ್ಕೂಟ್ಟ ಸ್ಥಾಪಕ ಅಧ್ಯಕ್ಷ ಅಜ್ಜಮಾಡ ಕಟ್ಟಿಮಂದಯ್ಯ, ತಾಲೂಕು ಮಾಜಿ ಅಧ್ಯಕ್ಷ ಆದೇಂಗಡ ಅಶೋಕ್, ಕಾರ್ಯದರ್ಶಿ ಜಮ್ಮಡ ಮೋಹನ್ ಮಾದಪ್ಪ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.