ಶನಿವಾರಸಂತೆ, ಜ. 7: ಬ್ಯಾಡಗೊಟ್ಟ ಗ್ರಾ.ಪಂ. ವ್ಯಾಪ್ತಿಯ ತಳಗೂರು-ಶಿವರಳ್ಳಿ ಗ್ರಾಮದಲ್ಲಿ ಸುಮಾರು 80 ಕುಟುಂಬಗಳು ವಾಸಿ ಸುತ್ತಿದ್ದು, ಗ್ರಾಮಸ್ಥರಿಗೆ ಕುಡಿಯುವ ನೀರಿನ ಸಮಸ್ಯೆ ಇದ್ದು, ಗ್ರಾಮಸ್ಥರ ಮನವಿಯ ಮೇರೆ ಜಿ.ಪಂ. ಸದಸ್ಯ ಪುಟ್ಟರಾಜು ತಮ್ಮ ಅನುದಾನದಲ್ಲಿ ರೂ. 8 ಲಕ್ಷ ವೆಚ್ಚದ ಗ್ರಾಮೀಣ ಕುಡಿಯುವ ನೀರಿನ (25 ಸಾವಿರ ಲೀಟರ್) ಗ್ರೌಂಡ್ ಲೆವೆಲ್ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಸದಸ್ಯ ಎಸ್.ಎಂ. ರೇಣುಕಾ ಮೇದಪ್ಪ, ಪ್ರಮುಖರಾದ ಬಿ.ಎನ್. ಈರಪ್ಪ, ಮೇದಪ್ಪ, ಬಿ.ಕೆ. ದಿನೇಶ್‍ಕುಮಾರ್, ಮಲ್ಲೇಶ, ಗಿರಿ, ಮಂಜುನಾಥ್, ಎಸ್.ಪಿ. ದಯಾನಂದ, ಎಸ್.ಟಿ. ಆನಂದ ಹಾಗೂ ಇತರರು ಉಪಸ್ಥಿತರಿದ್ದರು. ಮೇದಪ್ಪ ಸ್ವಾಗತಿಸಿ, ವಂದಿಸಿದರು.