ಕೆ.ಎಸ್. ಕೃಷ್ಣೇಗೌಡ
ಕೂಡಿಗೆ, ಜ. 7: ಕುವೆಂಪು ಅವರ ಆದರ್ಶ ಗುಣಗಳು ಪ್ರಪಂಚಕ್ಕೆ ಮಾದರಿಯಾಗಿದ್ದು, ಅವುಗಳನ್ನು ಇಂದಿನ ಸಮಾಜದಲ್ಲಿ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ತನ್ನ ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್. ಕೃಷ್ಣೇಗೌಡ ಅವರು ಹೇಳಿದರು.
ಅವರು ತೊರೆನೂರು ಶ್ರೀ ಶನೇಶ್ವರ ದೇವಾಲಯದ ಆವರಣದಲ್ಲಿ ನಡೆದ ಕುವೆಂಪು ಜನ್ಮೋತ್ಸವ ಮತ್ತು ಒಕ್ಕಲಿಗ ಸಂಘದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಮುಂದುವರೆದು ಮಾತನಾಡಿ, ವಿಶ್ವಮಾನವ ಕುವೆಂಪು ಅವರ ಆದರ್ಶಗಳು ಎಲ್ಲಾ ವರ್ಗಕ್ಕೂ ಸೇರಿದವಾಗಿವೆ.
ಗ್ರಾಮೀಣ ಪ್ರದೇಶದಲ್ಲಿ ವಿಶ್ವಮಾನವನ ಅಧ್ಯಯನ ಕೇಂದ್ರವನ್ನು ತೆರೆಯುವ ಮೂಲಕ ಅವರ ಸಂದೇಶವನ್ನು ಇಂದಿನ ಸಮಾಜಕ್ಕೆ ತಿಳಿಸುವಂತಾಗಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕಲಿಗ ಸಂಘದ ಅಧ್ಯಕ್ಷ ಟಿ.ಪಿ. ಸೋಮಶೇಖರ್ ವಹಿಸಿ ಮಾತನಾಡಿದರು.
ಈ ಸಂದರ್ಭ ತೊರೆನೂರು ಗ್ರಾ.ಪಂ ಸದಸ್ಯ ಮಹೇಶ್, ಒಕ್ಕಲಿಗ ಸಂಘದ ಉಪಾಧ್ಯಕ್ಷ ಟಿ.ಟಿ. ಪ್ರಕಾಶ್, ಗೌರವಾಧ್ಯಕ್ಷ ಟಿ.ಟಿ. ಗೋವಿಂದ, ಕಾರ್ಯದರ್ಶಿ ರಮೇಶ್, ನಿರ್ದೇಶಕರಾದ ವೆಂಕಟೇಶ್, ಮಂಜುನಾಥ್, ಕುಸುಮ ರಂಗೇಗೌಡ, ಹೆಚ್.ಎ. ರಮೇಶ್, ವಿ.ಟಿ. ದೇವರಾಜ್ ಸೇರಿದಂತೆ ಮತ್ತಿತರರು ಇದ್ದರು.