ನಾಪೆÇೀಕ್ಲು, ಜ. 7: ಮನೆಯ ಯಜಮಾನ 10 ದಿನಗಳ ಕಾಲ ಮನೆ ಬಿಟ್ಟು ಹೊರ ಹೋದರೆ, ಬೇರೆಯವರು ಆ ಮನೆಯೊಳಗೆ ಸೇರಿಕೊಳ್ಳುವ ಕಾಲವಿದು. ಅಂತಹದ್ದರಲ್ಲಿ ಹಲವಾರು ವರ್ಷಗಳಿಂದ ಮನೆಯಲ್ಲಿ ಯಾರೂ ಇಲ್ಲದೆ, ಮನೆ ಬಾಗಿಲು ತೆರೆದಿದ್ದರೆ ಏನಾಗಬಹುದು? ಇಲ್ಲಿ ಆಗುತ್ತಿರುವದು ಅದೇ. ಈ ವಸತಿ ಗೃಹ ಪುಂಡ ಪೆÇೀಕರಿಗಳ, ಗಾಂಜಾ ವ್ಯಸನಿಗಳ ಅನೈತಿಕ ಚಟುವಟಿಕೆಯ ಕೇಂದ್ರವಾಗಿ ಮಾರ್ಪಟ್ಟಿದೆ.

ಈ ಪಾಳು ಬಿದ್ದ ಕಟ್ಟಡ ನಿರ್ಜನ ಪ್ರದೇಶದಲ್ಲಿಲ್ಲ. ಜನನಿಬಿಡ, ಪೆÇಲೀಸ್ ವಸತಿ ಗೃಹÀ, ನಾಪೆÇೀಕ್ಲು ನಾಡ ಕಚೇರಿಗೆ ಹೊಂದಿಕೊಂಡಂತಿದೆ. ಆದರೆ ದುರದೃಷ್ಟವೆಂಬಂತೆ ಇದು ಪಾಳು ಬಿದ್ದು, ಭೂತ ಬಂಗಲೆಯಂತಿರುವ ಕಾರಣ ಇದರತ್ತ ಯಾರೂ ಗಮನಹರಿಸುವದೇ ಇಲ್ಲ. ಇದು ಸಮಾಜ ಘಾತುಕ ಶಕ್ತಿಗಳಿಗೆ ವರದಾನವಾಗಿದೆ ಎನ್ನುತ್ತಾರೆ ಸ್ಥಳೀಯರು.

ಮದ್ಯಪಾನ ಮಾಡುವವರು, ಗಾಂಜಾ ವ್ಯಸನಿಗಳು ಇಲ್ಲಿರುವದು ಸಾಮಾನ್ಯ. ಆದರೆ ಶಾಲಾ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಇಲ್ಲೇನು ಕೆಲಸ ಎಂಬದು ಸಾರ್ವಜನಿಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಸ್ಪೆಷಲ್ ಕ್ಲಾಸ್ ನೆಪ ಹೇಳಿ ಬರುವ ಕೆಲ ವಿದ್ಯಾರ್ಥಿಗಳು ಇದರ ಬಳಿ ಸುಳಿದಾಡುತ್ತಿರುವ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನೆಲ ಸಮಗೊಳಿಸಲು ಆಗ್ರಹ: ಈ ಕಟ್ಟಡ ಲೋಕೋಪಯೋಗಿ ಇಲಾಖೆಗೆ ಸೇರಿದ್ದಾಗಿದೆ. ಕಟ್ಟಡ ಪೂರ್ತಿಯಾಗಿ ಶಿಥಿಲಾವಸ್ಥೆ ತಲುಪಿದೆ. ಇದರ ನಿರ್ವಹಣೆ ಹಾಗಿರಲಿ ಇದಕ್ಕೆ ಬೀಗ ಹಾಕುವ ಸೌಜನ್ಯವನ್ನು ಕೂಡ ಇಲಾಖೆ ತೋರಿಲ್ಲ. ಇದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕಟ್ಟಡವನ್ನು ಇಲಾಖೆ ನೆಲ ಸಮಗೊಳಿಸುವದರ ಮೂಲಕ ಸಮಸ್ಯೆ ಬಗೆಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈ ವಸತಿ ನಿಲಯದ ಬಳಿ ಅಪರಿಚಿತರ ಸಂಚಾರ ಹೆಚ್ಚಾಗಿ ಕಂಡು ಬರುತ್ತಿದೆ. ನಾವೆಲ್ಲರೂ ಇಲ್ಲಿ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿದ್ದೇವೆ. ಇಲ್ಲಿ ನಡೆಯಬಹುದಾದ ಅನೈತಿಕ ಚಟುವಟಿಕೆಗಳಿಂದ ಸಮಾಜದಲ್ಲಿ ಸಾಮರಸ್ಯ ಹದಗೆಡಬಾರದು. ಅದಕ್ಕೂ ಮುನ್ನ ಇದನ್ನು ನೆಲಸಮಗೊಳಿಸಲು ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕು ಎಂದು ಉದ್ಯಮಿ ಎಂ.ಎ. ಮನ್ಸೂರ್ ಆಲಿ ಒತ್ತಾಯಿಸಿದ್ದಾರೆ. - ಪ್ರಭಾಕರ್