ಮಡಿಕೇರಿ, ಜ. 7: ವಿವಿಧ ಕಾರ್ಮಿಕ ಸಂಘಟನೆಗಳು ತಾ. 8 ರಂದು (ಇಂದು) ಹಮ್ಮಿಕೊಂಡಿರುವ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಜಿಲ್ಲೆಯಲ್ಲಿ ಖಾಸಗಿ ಬಸ್ ಹಾಗೂ ಚೇಂಬರ್ ಆಫ್ ಕಾಮರ್ಸ್ ಬೆಂಬಲ ಸೂಚಿಸಿಲ್ಲ.ಮುಷ್ಕರಕ್ಕೆ ತಮ್ಮ ಬೆಂಬಲವಿಲ್ಲ: ಖಾಸಗಿ ಬಸ್‍ಗಳು ಎಂದಿನಂತೆ ಸಂಚರಿಸಲಿವೆ ಎಂದು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಹಾಗೂ ಖಾಸಗಿ ಬಸ್ ಕಾರ್ಮಿಕರ ಸಂಘದ ಅಧ್ಯಕ್ಷ ದಿನೇಶ್ ನಾಯರ್ ಅವರುಗಳು ತಿಳಿಸಿದ್ದಾರೆ. ಮುಷ್ಕರಕ್ಕೆ ಚೇಂಬರ್‍ನಿಂದ ಯಾವದೇ ಕರೆಕೊಟ್ಟಿಲ್ಲ. ಯಾವದೇ ಒತ್ತಡ ಕೂಡ ಹೇರುವದಿಲ್ಲ. ಮುಷ್ಕರವನ್ನು ಬೆಂಬಲಿಸುವದು ವರ್ತಕರಿಗೆ ಬಿಟ್ಟಿದ್ದು; ಎಂದು ಚೇಂಬರ್ ಪ್ರಧಾನ ಕಾರ್ಯದರ್ಶಿ ಅಂಬೆಕಲ್ಲು ನವೀನ್ ಕುಶಾಲಪ್ಪ ತಿಳಿಸಿದ್ದಾರೆ.