ಮಡಿಕೇರಿ, ಜ. 7: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಹತ್ತು ಕುಟುಂಬ ಹದಿನೆಂಟು ಗೋತ್ರದ ಅರೆಭಾಷಿಕ ಗೌಡ ಜನಾಂಗ ಬಾಂಧವರಿಗಾಗಿ ನಡೆಸಿಕೊಂಡು ಬರುತ್ತಿರುವ ಕುಟುಂಬವಾರು ಕ್ರಿಕೆಟ್ ಪಂದ್ಯಾವಳಿ ಈ ಬಾರಿ ‘ಗೌಡ ಕ್ರಿಕೆಟ್ ಜಂಬರ-2020’ ಹೆಸರಿನಲ್ಲಿ ಏಪ್ರಿಲ್ ಕೊನೆಯ ವಾರ ಹಾಗೂ ಮೇ ತಿಂಗಳ ಮೊದಲ ವಾರದಲ್ಲಿ ಹದಿನೈದು ದಿನಗಳ ಕಾಲ ನಡೆಯಲಿದೆ.ಈ ಸಂಬಂಧ ಇಂದು ಕೊಡಗು ಗೌಡ ಸಮಾಜ ಕಟ್ಟಡದಲ್ಲಿರುವ ಯುವ ವೇದಿಕೆ ಕಚೇರಿಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಪಂದ್ಯಾವಳಿಯ ರೂಪು ರೇಷೆ ಬಗ್ಗೆ ಚರ್ಚಿಸಲಾಯಿತು. ಈ ಬಾರಿ ನೀತಿ, ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವ ಬಗ್ಗೆ ತಂಡಗಳಿಗೆ ಸೂಚಿಸುವದಲ್ಲದೆ ಅಧಿಕೃತವಾಗಿ ನೋಂದಣಿ ಮಾಡಿಕೊಳ್ಳುವ ತಂಡಗಳಿಗೆ ಮಾತ್ರ ಅವಕಾಶ ನೀಡುವ ಬಗ್ಗೆ ತೀರ್ಮಾನಿಸ ಲಾಯಿತು. ನೋಂದಾವಣಿಗೆ ಮಾ.30 ಕೊನೆಯ ದಿನಾಂಕ ನಿಗದಿಪಡಿಸ ಲಾಗಿದ್ದು, ಮೈದಾನ ಶುಲ್ಕ ಪಾವತಿಸಿ ನೋಂದಣಿ ಮಾಡಿಕೊಂಡು ಖಾತರಿಪಡಿಸಿಕೊಂಡ ತಂಡಗಳನ್ನು ಮಾತ್ರ ಟೈಸ್ ಹಾಕುವ ಬಗ್ಗೆ ತೀರ್ಮಾನಿಸಲಾಯಿತು. ಅಲ್ಲದೆ ಸಮಯ ಪಾಲನೆಯೊಂದಿಗೆ ಶಿಸ್ತು ಬದ್ಧವಾಗಿ ಪಂದ್ಯಾವಳಿ ಆಯೋಜಿಸುವ ಬಗ್ಗೆ ಚರ್ಚೆ, ಸಲಹೆ ಸೂಚನೆಗಳು ವ್ಯಕ್ತಗೊಂಡವು. ನೋಂದಾವಣಿಯನ್ನು ಯುವ ವೇದಿಕೆಯ ಕಚೇರಿಯಲ್ಲಿ ಮಾಡಿಕೊಳ್ಳಬೇಕು. ಪಂದ್ಯಾವಳಿ ಬಗ್ಗೆ ಹೆಚ್ಚಿನ ಮಾಹಿತಿಗೆ ಪರಿಚನ ಸತೀಶ್ (9448448646), ಕಟ್ಟೆಮನೆ ರೋಷನ್ (9449361933) ಇವರುಗಳನ್ನು ಸಂಪರ್ಕಿ ಸಬಹುದಾಗಿದೆ.

ಸಭೆಯಲ್ಲಿ ಕಾರ್ಯದರ್ಶಿ ಕಟ್ಟೆಮನೆ ರೋಷನ್, ಖಜಾಂಚಿ ನೈಯ್ಯಣಿ ಸಂಜು, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಕ್ಕೇರ ಲಕ್ಷ್ಮಣ, ಆಹಾರ ಸಮಿತಿ ಅಧ್ಯಕ್ಷ

(ಮೊದಲ ಪುಟದಿಂದ) ಪರಿಚನ ಸತೀಶ್, ಜಂಟಿ ಕಾರ್ಯದರ್ಶಿ ಪೂಜಾರಿರ ಸುಮನ್, ನಿರ್ದೇಶಕರುಗಳಾದ ಪುದಿಯನೆರವನ ರಿಶಿತ್, ಮೂಲೆಮಜಲು ಮನೋಜ್, ದಂಬೆಕೋಡಿ ಗಯಾ, ಕುಟ್ಟನ ಪ್ರಶಾಂತ್, ನಡುಮನೆ ಪವನ್ ಹಾಜರಿದ್ದರೆಂದು ಪ್ರಚಾರ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ತಿಳಿಸಿದ್ದಾರೆ.