ಶನಿವಾರಸಂತೆ, ಜ. 6: ಸಮೀಪದ ನಿಡ್ತ ಗ್ರಾಮದ ಎನ್.ಕೆ. ಕರುಣೇಶ್ (41) ಎಂಬವರು ಶನಿವಾರಸಂತೆಯ ಗಂಗಾ ಲಾಡ್ಜ್‍ನ ಕೊಠಡಿಯಲ್ಲಿ ಫ್ಯಾನ್‍ಗೆ ವೇಲ್‍ನಿಂದ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಲ ಬಾಧೆಯೇ ಆತ್ಮಹತ್ಯೆಗೆ ಕಾರಣ ಎಂದು ತಿಳಿದು ಬಂದಿದೆ.ಡಿ.ಸಿ.ಸಿ. ಬ್ಯಾಂಕಿನಲ್ಲಿ ಪಿಗ್ಮಿ ಸಂಗ್ರಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕರುಣೇಶ್ ಅವರು ಶುಂಠಿ ಬೇಸಾಯಕ್ಕೆ ಗ್ರಾಮಸ್ಥರಿಂದ ಸಾಲ ಪಡೆದಿದ್ದು, ಖಾಸಗಿ ಫೈನಾನ್ಸ್‍ನಲ್ಲೂ ಚಿನ್ನ ಗಿರವಿ ಇಟ್ಟು ಸಾಲ ಪಡೆದಿದ್ದರು. ಸಾಲ ಬಾಧೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂಬಂಧಿ ಮುಳ್ಳೂರು ಗ್ರಾಮದ ಎಂ.ಆರ್. ಮನೋಜ್ ದೂರು ನೀಡಿದ್ದಾರೆ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.