ಹಿರಿಯರು ಮನೆಯ ಲಕ್ಷಣ, ಅವರಿಲ್ಲದ ಮನೆ ಭಣ-ಭಣ,
ನಿಮ್ಮ ಹಿರಿಯರನ್ನು ಈ ಕೆಳಗಿನಂತೆ ಗೌರವಿಸಿರಿ.
v ಅವರ ಮುಂದೆ ಕುಳಿತಾಗ ಫೋನ್ಗಳನ್ನು ದೂರವಿಡಿ.
v ಅವರು ಹೇಳುವ ಮಾತುಗಳನ್ನು ಪೂರ್ತಿಯಾಗಿ ಕೇಳಿ, ಮಧ್ಯದಲ್ಲೇ ಎದ್ದು ಹೋಗದಿರಿ.
v ಅವರ ಜೊತೆ ಇರುವಾಗ ಗೌರವದಿಂದ ವ್ಯವಹರಿಸಿ.
v ಕೇವಲ ಸಂತೋಷದ ವಿಷಯ ಮಾತ್ರ ಹಂಚಿಕೊಳ್ಳಿ.
v ದುಃಖದ ವಿಷಯ ಆದಷ್ಟು ಅವರಿಗೆ ಹೇಳದಿರಿ.
v ಅವರಿಗೆ ಇಷ್ಟವಿರುವ ಗೆಳೆಯರ, ಆಪ್ತರ ಬಗ್ಗೆ ಒಳ್ಳೆಯ ಮಾತಾಡಿ.
v ಅವರ ಸಂತೋಷದ ದಿನಗಳ ಬಗ್ಗೆ ನೆನಪಿಸಿ.
v ಅವರು ಹೇಳಿದ್ದನ್ನೇ ಹೇಳುತ್ತಿದ್ದರೆ, ನೀವು ಹೊಸದಾಗಿ ಕೇಳುತ್ತಿರುವ ಹಾಗೆ ಇರಿ.
v ಕಳೆದುಹೋದ ಕಹಿ ವಿಷಯಗಳನ್ನು ನೆನಪಿಸಬೇಡಿ, ಅದನ್ನು ಆದಷ್ಟು ಮರೆಯುವಂತೆ ಮಾಡಿ.
v ಅವರ ಮುಂದೆ ಕುಳಿತಾಗ ಬೇರೆಯವರ ಜೊತೆ ಮಾತಾಡಬೇಡಿ.
v ಅವರ ಮುಂದೆ ಗೌರವಭಾವದಿಂದ ಕುಳಿತುಕೊಳ್ಳಿ.
v ಅವರ ಮಾತನ್ನು ತೆಗಳಬೇಡಿ.
v ಅವರು ಮಾತನಾಡುವಾಗ ಅರ್ಧಕ್ಕೆ ತಡೆಯಬೇಡಿ.
v ಅವರ ವಯಸ್ಸಿಗೆ ಸದಾ ಬೆಲೆಕೊಡಿ.
v ಅವರ ಮುಂದೆ ಅವರ ಮಕ್ಕಳನ್ನು ಬೈಯಬೇಡಿ,
v ಅವರ ಮುಂದೆ ಮೊಮ್ಮಕ್ಕಳಿಗೆ ಹೊಡೆಯಬೇಡಿ.
v ನೀವು ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ನಿಮ್ಮ ಗೆಳೆಯರ ಮುಂದೆ ನಿಮ್ಮ ಹಿರಿಯರನ್ನು ಗೌರವಿಸಿ, ಇಲ್ಲದಿದ್ದರೆ ಗೆಳೆಯರೂ ಕೂಡ ಗೌರವಿಸುವುದಿಲ್ಲ.
v ಅವರ ಮುಂದೆ ದ್ವನಿ ಎತ್ತರಿಸಿ ಮಾತನಾಡಬೇಡಿ.
v ಅವರ ಮುಂದೆ ಕಾಲು ಚಾಚಿ, ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳಬೇಡಿ.
v ಅವರ ಕಡೆ ಬೆನ್ನು ಮಾಡಿ ಕೂಡ ಕುಳಿತುಕೊಳ್ಳಬೇಡಿ.
v ಅವರ ನ್ಯೂನತೆಯನ್ನು ಎತ್ತಿ ತೋರಿಸಬೇಡಿ.
v ಸಣ್ಣ-ಸಣ್ಣ ಬಳಲಿಕೆಯನ್ನು ಅವರ ಮುಂದೆ ಹೇಳಬೇಡಿ.
v ಅವರು ಪಾಲಿಸುತ್ತಾ ಬಂದಿರುವ ಸಂಪ್ರದಾಯಗಳನ್ನು ಬದಲಿಸಲು ಪ್ರಯತ್ನಿಸಬೇಡಿ.
v ನಿಮ್ಮ ಕಷ್ಟಗಳನ್ನು ತಿಳಿಸಬೇಡಿ, ಆದರೆ ಅವರಿಂದ ಸಲಹೆ ಪಡೆದುಕೊಳ್ಳಿ.
v ಅವರ ವಯಸ್ಸಿನ ಬಗ್ಗೆ ಹೀಯಾಳಿಸಬೇಡಿ.
v ಅವರು ಮಾಡಿದ ತಪ್ಪಿಗೆ ನಗಬೇಡಿ, ನೋಡಿಯೂ ನೋಡದಹಾಗೆ ಇರಿ.
v ಹೋಗುವಾಗ ಬರುವಾಗ ಭೇಟಿಯಾಗಿ ಆಶೀರ್ವಾದ ಪಡೆಯಿರಿ.
v ಅವರಿಗೆ ಇಷ್ಟವಾದ ಹೆಸರಿನಿಂದಲೇ ಕರೆಯಿರಿ.
v ಅವರ ಅನುಭವವನ್ನು ತಿಳಿದುಕೊಳ್ಳಿ ಮತ್ತು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.
v ದಿನಕ್ಕೆ ಕನಿಷ್ಟ 1 ಗಂಟೆಯಾದರೂ ಮಕ್ಕಳನ್ನು ಅವರ ಹತ್ತಿರ ಬಿಡಿ.
v ಅವರನ್ನು ಒಂಟಿಯಾಗಿ ಬಿಡಬೇಡಿ, ನಿಮ್ಮ ಜೊತೆ ಇರಿಸಿಕೊಳ್ಳಿ.
v ಅವರ ಪ್ರಶ್ನೆಗೆ ಸರಿಯಾದ ಉತ್ತರ ಕೊಡಿ, ಪ್ರಶ್ನೆಗೆ ಮರುಪ್ರಶ್ನೆ ಮಾಡಬೇಡಿ.
v ನಿಮ್ಮ ಕರ್ತವ್ಯ ಮರೆಯಬೇಡಿ, ಬೇರೆಯವರ ಕರ್ತವ್ಯ ಲೋಪದ ಬಗ್ಗೆ ಯೋಚಿಸಬೇಡಿ.
v ಹಿರಿಯರು ನಮಗೆ ದೇವರಿದ್ದಹಾಗೆ, ಅವರ ಅನುಭವ, ಮಾರ್ಗದರ್ಶನ, ಅವರ ಆಶೀರ್ವಾದ ನಮಗೆ ಅತ್ಯವಶ್ಯಕ.
-ಕೃಷ್ಣಾರ್ಪಣಮಸ್ತು
(ಸತ್ಸಂಗ ಸಂಗ್ರಹ)